ಮಂಡ್ಯ: ರಾತ್ರೋರಾತ್ರಿ ಕೊಟ್ಟಿಗೆಯಲ್ಲಿ ೭ ಕುರಿ ಗಳನ್ನು ಖದೀಮರು ಕದ್ದುಕೊಂಡು ಹೋಗಿರುವಂತಹ ಘಟನೆ ಹಳೇ ಮಾವಿನಕೆರೆ ಗ್ರಾಮದಲ್ಲಿ ತಡರಾತ್ರಿ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಗ್ರಾಮದ ರೈತ ಚಂದ್ರೆಗೌಡರಿಗೆ ಸೇರಿದ ಕುರಿಗಳು. ಒಂದುವರೆ ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಏಳು ಕುರಿಗಳ ಕಳ್ಳತನ. ಹಲವು ವರ್ಷಗಳಿಂದ ಸಾಲ ಮಾಡಿ ಕುರಿ ಸಾಗಾಣಿಕೆಯಲ್ಲಿ ಜೀವನ ಸಾಗಿಸುತ್ತಿದ್ದ ರೈತ. ತಡರಾತ್ರಿ ಕೊಟ್ಟಿಗೆಯಲ್ಲಿದ್ದ ೪೭ ಕುರಿಗಳಲ್ಲಿ ಕಳ್ಳತನವಾಗಿದೆ. ಸಿಲುಕಿಕೊಂಡಿದ್ದಾನೆ ಕುರಿಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ರೈತ ಸಿಲುಕಿಕೊಂಡಿದ್ದಾನೆ.
ಸೂಕ್ತ ನ್ಯಾಯ ಒದಗಿಸಿ ಕೊಡುವಂತೆ ಮನವಿ
ತಾಲೂಕಿನಲ್ಲಿ ಹಲವು ದಿನಗಳಿಂದ ರಾಸು ಕಳ್ಳತನ ಹೆಚ್ಚಾಗುತ್ತಿದೆ. ನಮ್ಮ ಗ್ರಾಮದ ಬಡ ರೈತ ಚಂದ್ರೇಗೌಡರಿಗೆ ಸೇರಿದ ೭ ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿಗಳು ಶೀಘ್ರವೇ ಕಳ್ಳರನ್ನು ಬಂಧಿಸುವಂತೆ ಆಗ್ರಹಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
