Sunday, April 20, 2025
Google search engine

Homeಅಪರಾಧಮೊಬೈಲ್ ಹಾಟ್‌ಸ್ಪಾಟ್ ಆನ್ ಮಾಡಲು ನಿರಾಕರಿಸಿದ ಪತ್ನಿಯನ್ನು ಕೊಲೆ ಮಾಡಿದ ಪತಿ

ಮೊಬೈಲ್ ಹಾಟ್‌ಸ್ಪಾಟ್ ಆನ್ ಮಾಡಲು ನಿರಾಕರಿಸಿದ ಪತ್ನಿಯನ್ನು ಕೊಲೆ ಮಾಡಿದ ಪತಿ

ಹರಿಯಾಣ: ಮೊಬೈಲ್ ಹಾಟ್‌ಸ್ಪಾಟ್ ಅನ್ನು ಆನ್ ಮಾಡಲು ನಿರಾಕರಿಸಿದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಹರಿಯಾಣ ರೋಹ್ಟಕ್ ನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ವರದಿಗಳ ಪ್ರಕಾರ ಮದೀನ ಗ್ರಾಮದ ನಿವಾಸಿ ಅಜಯ್ ಕುಮಾರ್ ಬಳಸಿತ್ತಿದ್ದ ಮೊಬೈಲ್ ಡೇಟಾ ಖಾಲಿಯಾದಾಗ ಆತನ ಪತ್ನಿ ರೇಖಾ ಬಳಿ ಮೊಬೈಲ್‌ನ ವೈ-ಫೈ ಹಾಟ್‌ಸ್ಪಾಟ್ ಅನ್ನು ಆನ್ ಮಾಡಲು ಹೇಳಿದ್ದಾನೆ. ಆದರೆ ಅಜಯ್ ಅವರ ಪತ್ನಿ ಹಾಟ್‌ಸ್ಪಾಟ್ ಅನ್ನು ಆನ್ ಮಾಡಲು ನಿರಾಕರಿಸಿ ತನ್ನ ಮೊಬೈಲ್‌ನಲ್ಲಿ ಕಡಿಮೆ ಡೇಟಾ ಉಳಿದಿದೆ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಅಜಯ್ ಪತ್ನಿಯನ್ನು ಹರಿತವಾದ ಆಯುಧದಿಂದ ಕೊಂದು ಪರಾರಿಯಾಗಿದ್ದಾನೆ.

ರೇಖಾ ಕುಟುಂಬದವರ ಹೇಳಿಕೆ ಆಧರಿಸಿ ಆರೋಪಿ ಅಜಯ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಕೆಲ ಗಂಟೆಗಳ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆತನಿಂದ ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

RELATED ARTICLES
- Advertisment -
Google search engine

Most Popular