Saturday, April 19, 2025
Google search engine

Homeಸ್ಥಳೀಯಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನಾಚರಣೆ ಅಂಗವಾಗಿ ವಯನಾಡಿನ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ನೀಡುವ ಮೂಲಕ ಅರ್ಥಪೂರ್ಣ...

ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮ ದಿನಾಚರಣೆ ಅಂಗವಾಗಿ ವಯನಾಡಿನ ಸಂತ್ರಸ್ತರಿಗೆ ದಿನಬಳಕೆ ವಸ್ತುಗಳನ್ನು ನೀಡುವ ಮೂಲಕ ಅರ್ಥಪೂರ್ಣ ಆಚರಣೆ

ಮೈಸೂರು : ಎನ್ ಆರ್ ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಲೀಕರಾದ ಗಂಧನಳ್ಳಿ ವೆಂಕಟೇಶ್ ನೇತೃತ್ವದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಜನ್ಮ ದಿನಾಚರಣೆ ವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ನಮ್ಮ ನಡೆ ಕೇರಳದ ವಯನಾಡಿನ ಸಂತ್ರಸ್ತರ ಕಡೆ ಎಂಬ ಘೋಷವಾಕ್ಯದೊಂದಿಗೆ 1 ಲಕ್ಷ ರೂ ದಿನನಿತ್ಯ ವಸ್ತುಗಳನ್ನು ಅವರ ಆಸ್ಪತ್ರೆಯ ಸಿಬ್ಬಂದಿಗಳು ಅಂಬುಲೆನ್ಸ್ ಮೂಲಕ ತಲುಪಿಸಲು ಮುಂದಾಗಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀನಿವಾಸ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಾಲೀಕರಾದ ಗಂಧನಹಳ್ಳಿ ವೆಂಕಟೇಶ್ ರವರು ಮಾತನಾಡಿ, ಜನರಿಗೆ ಸಮಸ್ಯೆ ಮತ್ತು ಸಂಕಷ್ಟಗಳು ಎದುರಾದಾಗ ನಮ್ಮ ಆಸ್ಪತ್ರೆಯಿಂದ ಸಹಾಯ ಸಹಕಾರ ನೀಡುತ್ತಾ ಬಂದಿದೆ, ಈ ನಿಟ್ಟಿನಲ್ಲಿ ವಯನಾಡ್ ದುರಂತದಲ್ಲಿ ನಮ್ಮ ಆಸ್ಪತ್ರೆ ವತಿಯಿಂದ ಒಂದು ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಕಳುಹಿಸಲಾಗುತ್ತಿದೆ. ಮಳೆ ಪ್ರವಾಹ ದುರಂತದಲ್ಲಿ ಜನರು ಸಂಕಷ್ಟದಲ್ಲಿದ್ದಾರೆ, ಸರ್ಕಾರ ಜೊತೆಯಲ್ಲಿ ಸಂಘ ಸಂಸ್ಥೆಗಳು ಸಾರ್ವಜನಿಕರು ಸಹಕಾರ ನೀಡಿದಾಗ ಬಂದ ಸಂಕಷ್ಟಗಳಿಗೆ ಸುಲಭ ಪರಿಹಾರ ನೀಡಬಹುದಾಗಿದೆ ಎಂದರು.

ಮನುಷ್ಯ ಕಷ್ಟದಲ್ಲಿದ್ದಾಗ ಮಾನವೀಯತೆ ಅರಿತ ವ್ಯಕ್ತಿಗಳು ಸಹಾಯ ಮಾಡುವುದು ಮನುಕುಲದ ಧರ್ಮ ಹಾಗಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರವರ ಹುಟ್ಟುಹಬ್ಬವನ್ನ ಅರ್ಥಪೂರ್ಣವಾಗಿ ಯಾವುದೇ ದುಂದುವೆಚ್ಛ ಮಾಡದೇ ಕೇರಳದ ವಯನಾಡು ಪ್ರಕೃತಿ ವಿಕೋಪದಿಂದಾಗಿ ತೊಂದರೆಯಲ್ಲಿರುವ ಜನರ ನೆರವಿಗಾಗಿ ದಿನಬಳಕೆ ಮತ್ತು ಅಗತ್ಯಕರ ಔಷಧಿಗಳನ್ನು ಕಳಿಸಿಕೊಡುತ್ತಿದ್ದೇವೆ ಎಂದರು.

ಇದೇ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ವೈದ್ಯರಾದ ಕಮಲಮ್ಮ, ಸುಮಂತ್, ಯುವರಾಜ್, ತೇಜಸ್, ಗುರುರಾಜ್, ಹಾಗೂ ಇನ್ನಿತರ ಸಿಬ್ಬಂದಿಗಳು ಹಾಜರಿದ್ದರು

RELATED ARTICLES
- Advertisment -
Google search engine

Most Popular