Monday, April 21, 2025
Google search engine

Homeಸ್ಥಳೀಯಮೃತ ಯೋದನ ಮನೆಗೆ ಮನ್ಮುಲ್ ನಿರ್ದೇಶಕ ಡಾಲುರವಿ ಭೇಟಿ ಸಾಂತ್ವನ

ಮೃತ ಯೋದನ ಮನೆಗೆ ಮನ್ಮುಲ್ ನಿರ್ದೇಶಕ ಡಾಲುರವಿ ಭೇಟಿ ಸಾಂತ್ವನ


ಕೆ.ಆರ್ ಪೇಟೆ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರತರಾಗಿದ್ದಾಗಲೇ ಅನಾರೋಗ್ಯದಿಂದ ಮೃತರಾದ ಯೋಧ ಕೆ.ಪಿ ಜನಾರ್ದನಗೌಡ ಅವರ ನಿವಾಸಕ್ಕೆ ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ನಿರ್ದೇಶಕರಾದ ಡಾಲು ರವಿ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ.ವೈಯಕ್ತಿಕವಾಗಿ ಧನ ಸಹಾಯ ನೀಡಿದರು
ಜಮ್ಮು-ಕಾಶ್ಮೀರದಲ್ಲಿ ಕರ್ತವ್ಯ ನಿರತನಾಗಿದ್ದ ಭಾರತೀಯ ಸೇನೆಯ ಯೋಧ ಕೆ ಪಿ ಜನಾರ್ಧನಗೌಡ ಕರ್ತವ್ಯ ನಿರತನಾಗಿದ್ದಾಗಲೇ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ.ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದಲ್ಲಿರುವ ಟಯೋಧನ ಮನೆಗೆ ತೆರಳಿದ ಅವರು ಮೃತ ಯೋಧನ ಪತ್ನಿ ಸೇರಿದಂತೆ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿ ಮನ್ಮುಲ್ ನಿರ್ದೇಶಕ ಡಾಲು ರವಿ ಅವರು ಅನಾರೋಗ್ಯಕ್ಕೆ ತುತ್ತಾಗಿ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ.ಆದರೆ ಭಾರತೀಯ ಸೇನೆಯಲ್ಲಿದ್ದು ಹಲವಾರು ವರ್ಷಗಳ ಕಾಲ ದೇಶವನ್ನು ಹಾಗೂ ಭಾರತೀಯರನ್ನು ರಕ್ಷಣೆ ಮಾಡಿದ ಕೀರ್ತಿ,ಭಾರತ ಮಾತೆಯ ಸೇವೆ ಮಾಡಿದ ಯಶಸ್ಸು ಅವರಿಗೆ ಸಲ್ಲುತ್ತದೆ. ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಭಾರತೀಯರಾದ ನಮಗೆ ಹೆಮ್ಮೆಯಪ್ರತೀಕ.ಜನಾರ್ಧನ್‌ಗೌಡರು ಮತ್ತೆ ಹುಟ್ಟಿ ಬರಲಿ,ಅವರ ಹೆಸರು ತಾಲ್ಲೂಕಿನ ಇತಿಹಾಸದ ಪುಟಗಳಲ್ಲಿ ದಾಖಲಾಗಲಿ ಎಂದು ಆಶಿಸಿದರು.ಇದೇ ವೇಳೆ ವೀರಯೋಧ ಜನಾರ್ಧನ್‌ಗೌಡ ಕುಟುಂಬಕ್ಕೆ ವೈಯಕ್ತಿಕವಾಗಿ ಧನಸಹಾಯ ನೀಡಿದರು.ಈ ಸಂದರ್ಭದಲ್ಲಿ ಪ್ರಕಾಶ್.ಮಹೇಂದ್ರ.ಗುಡ್ಡೆಹೊಸಹಳ್ಳಿ.ಗೋಪಾಲ್.ದೇವರಾಜು.ವೆಂಕಟೇಶ್.ರಾಜಣ್ಣ.ಹರೀಶ್ ಕೆ.ಎಂ ಐರೋನಹಳ್ಳಿ ಮಂಜು.ಶೀಳನೆರೆ ಅಜಯ್.ಸೇರಿದಂತೆ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular