Saturday, April 19, 2025
Google search engine

Homeಸ್ಥಳೀಯಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ: ಪ್ರೊ. ಸೋಮಣ್ಣ

ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ: ಪ್ರೊ. ಸೋಮಣ್ಣ

ಮೈಸೂರು: ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡು ಉದ್ಯೋಗವಂತರಾಗಿ ಆರ್ಥಿಕವಾಗಿ ಸಬಲೀಕರಣ ಹೊಂದಬೇಕು ಎಂದು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸೋಮಣ್ಣ ಅಭಿಪ್ರಾಯ ಪಟ್ಟರು.

ಇಂದು ಶನಿವಾರ ಮೈಸೂರಿನ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಬಾರ್ಕ್ಲೇನ್ ಸಹಕಾರದೊಂದಿಗೆ ಸಮರ್ಥನಂ ಅಂಗವಿಕಲರ ಸಂಸ್ಥೆ ಹಾಗೂ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಐ.ಕ್ಯೂ.ಎ.ಸಿ ಘಟಕ, ದಿವ್ಯಾಂಗ ಸಬಲೀಕರಣ ಸಮಿತಿ, ಹಿರಿಯ ವಿದ್ಯಾರ್ಥಿಗಳ ಸಂಘ, ಪ್ಲೀಸ್ಮೆಂಟ್ ಸೆಲ್ ಆಶ್ರಯದಲ್ಲಿ ನಡೆದ ಬೃಹತ್ ಉದ್ಯೋಗ ಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಭ್ಯರ್ಥಿಗಳು ಉದ್ಯೋಗದ ಜೊತೆಯಲ್ಲೇ ಅತಿಹೆಚ್ಚು ಪುಸ್ತಕಗಳನ್ನು ಖರೀದಿಸಿ, ಓದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಆಗಬೇಕಾಗುತ್ತದೆ. ಅಲ್ಲದೆ ಅವಕಾಶ ಇದ್ದಾಗ ಸ್ವಂತ ಉದ್ಯೋಗ ಮಾಡಿಕೊಳ್ಳಬೇಕಾಗುತ್ತದೆ ಎಂದರು. ಕಾರ್ಯಕ್ರಮದ ಉದ್ಘಾಟಿಸಿದ ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಪ್ಲೇಸ್ಮೆಂಟ್ ಸೆಲ್ ಮುಖ್ಯಸ್ಥರಾದ ಕೆ.ಸತೀಶ್ ಮಾತನಾಡಿ, ಸಮರ್ಥನಂ ಸಂಸ್ಥೆಯು ದೇಶದ್ಯಂತ ೧೮೨ ಉದ್ಯೋಗ ಮೇಳವನ್ನು ಏರ್ಪಡಿಸಿದ್ದು, ಇದರಲ್ಲಿ ೩೦ ಸಾವಿರಕ್ಕೂ ಹೆಚ್ಚು ನಿರುದ್ಯೋಗಿ ಯುವಜನತೆ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರು.

ಸದರಿ ಉದ್ಯೋಗ ಮೇಳಕ್ಕೆ ಸಾವಿರಕ್ಕೂ ಹೆಚ್ಚು ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದು, ಅದರಲ್ಲಿ ೨೮೪ ಕ್ಕೂ ಹೆಚ್ಚು ಅಭ್ಯರ್ಥಿಗಳು ಸ್ಥಳದಲ್ಲೇ ಆಯ್ಕೆಯಾಗಿರುತ್ತಾರೆ.

ಸದರಿ ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಘಟಕದ ಸಂಚಾಲಕರಾದ ಡಾ.ವಿ.ಮಂಜುನಾಥ್, ದಿವ್ಯಂಗ ಸಬಲೀಕರಣ ಸಮಿತಿಯ ಸಂಚಾಲಕರಾದ ಡಾ. ನಾಗರಾಜ, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಪ್ರೊ.ಜಯಶ್ರೀ, ಪ್ಲೀಸ್ಮೆಂಟ್ ಸೆಲ್ ನ ಸಂಚಾಲಕರಾದ ಡಾ. ನಿರಂಜನ್ ಬಾಬು, ಸಮರ್ಥನಂ ಸಂಸ್ಥೆಯ ಸುಭಾಷ್, ಶಿವರಾಜು, ವೀರಭದ್ರ ಪಟೇಲ್ ಸೇರಿದಂತೆ ಮತ್ತಿತ್ತರು ಭಾಗವಹಿಸಿದರು.

RELATED ARTICLES
- Advertisment -
Google search engine

Most Popular