Saturday, April 19, 2025
Google search engine

Homeರಾಜ್ಯಸುದ್ದಿಜಾಲಹುಣಸೂರು: ವ್ಯವಸಾಯೋತ್ಪನ್ನ ಮಳಿಗೆಯಲ್ಲಿ ಛಾಪಾಕಾಗದ ಮಾರಾಟಕ್ಕೆ ಚಾಲನೆ

ಹುಣಸೂರು: ವ್ಯವಸಾಯೋತ್ಪನ್ನ ಮಳಿಗೆಯಲ್ಲಿ ಛಾಪಾಕಾಗದ ಮಾರಾಟಕ್ಕೆ ಚಾಲನೆ

ಹುಣಸೂರು: ನಗರದ ಜನತೆಗೆ ಸಹಕಾರಿಯಾಗಲೆಂದು ಈ ಸ್ಟಾಂಪಿಂಗ್ ಕಛೇರಿ ತೆರೆಯಲಾಗಿದೆ ಎಂದು ಟಿಎಪಿಎಂಎಸ್ ನ ಅಧ್ಯಕ್ಷ ಬಸವಲಿಂಗಯ್ಯ ತಿಳಿಸಿದರು.

ನಗರದ ತಾಲೂಕು ವ್ಯವಸಾಯೋತ್ಪನ್ನ ಮಳಿಗೆಯಲ್ಲಿ ಛಾಪಾಕಾಗದ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಶುಭಸಾಮಾರಂಭಗಳಿಗೆ, ಸನ್ಮಾನ ಕಾರ್ಯಕ್ರಮಗಳಿಗೆ, ಶಾಲು, ಪೇಟ, ಮಣಿಹಾರ, ಗಂಧದ ಹಾರ ಉತ್ತಮ ದರ್ಜೆಯ ಸಾಮಾಗ್ರಿಗಳು ದೊರೆಯಲಿದ್ದು ಜನತೆ ಸದ್ಭಳಕೆ ಮಾಡಿಕೊಳ್ಳಬೇಕೆಂದರು.

ಹಾಗೆ ನಗರದ ಸಂತೆಮಾಳದಲ್ಲಿ ತಾಲೂಕು ವ್ಯವಸಾಯೋತ್ಪನ್ನ ಸಮಿತಿ ಯಿಂದ ನಾಲ್ಕು ವಾಣಿಜ್ಯ ಮಳಿಗಳನ್ನು ನಿರ್ಮಿಸಿದ್ದು ಸದ್ಯದಲ್ಲೇ ಲೋಕಾರ್ಪಣೆ ಯಾಗಲಿದೆ. ಇನ್ನೂ ಮೂರು ಮಳಿಗೆಗಳು ಸಿದ್ದವಾಗುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ, ಉಪಾಧ್ಯಕ್ಷ ರೇವಣ್ಣ, ಸಂಘದ ನಿರ್ದೇಶಕರಾದ ಅಸ್ವಾಳ್ ಕೆಂಪೇಗೌಡ, ಬಿ.ನಾಗರಾಜು, ಹೆಚ್.ಟಿ.ಬಾಬು, ಜಿ.ಎನ್.ವೆಂಕಟೇಶ್, ರಮೇಶ್, ಹೆಚ್.ಪ್ರೇಮ್ ಕುಮಾರ್, ಮಂಗಳಗೌರಿ, ಸುಜಾತ, ಇಂದುಕಲಾ, ಮಾಜಿ ಅಧ್ಯಕ್ಷ. ಸತ್ಯನಾರಾಯಣ, ಕಾರ್ಯದರ್ಶಿ ಎ.ಎಸ್.ಹೇಮಲತಾ ಇದ್ದರು.

RELATED ARTICLES
- Advertisment -
Google search engine

Most Popular