ಮಂಡ್ಯ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್ ರವರು ಜುಲೈ ೪ ರಂದು ನಾಗಮಂಗಲ ತಾಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಚೆಭೂವನಹಳ್ಳಿ ಗ್ರಾಮದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಅಭಾವದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು.
ಮಲ್ಲಸಂದ್ರ ಗ್ರಾಮದ ಬಳಿ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪರಿಶೀಲನೆ, ಶಿಂಷಾ ಅಣೆಕಟ್ಟೆಯ ಜಾಕ್ವೆಲ್ ಪರಿಶೀಲನೆ, ಪರಿಶೀಲನ ವೇಳೆ ಪ್ರತಿದಿನ ನೀರಿನ ಹದಿನಾಲ್ಕು ಅಂಶಗಳನ್ನು ಪರೀಕ್ಷಿಸಿ ಸರಬರಾಜು ಮಾಡಲು ಕ್ರಮವಹಿಸಿ, ನೀರಿನ ಪರಿಶೀಲನೆ ಮತ್ತು ನಿರ್ವಹಣೆ ಸಂಬಂಧ ಅಗತ್ಯ ದಾಖಲಾತಿಗಳನ್ನು ನಿರ್ವಹಿಸಲು ಸೂಚಿಸಿದರು. ಮುಂದಿನ ೧೫ ದಿನಗಳಲ್ಲಿ ಮಳೆ ಕೊರತೆಯಿಂದ ಕುಡಿಯುವ ನೀರಿನ ಅಭಾವ ಉಂಟಾಗುವ ಗ್ರಾಮಗಳನ್ನು ಗುರುತಿಸಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ರವರಿಗೆ ಸೂಚಿಸಿದರು. ಮಾಯಿಗೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರಗಲು ಗ್ರಾಮದ ಹೊನ್ನಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ ಮಲ್ಲೇನಹಳ್ಳಿ ಗ್ರಾಮದ, ದೇವಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾಮಸಂದ್ರ ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು.
ಸದರಿ ಕುಡಿಯುವ ನೀರಿನ ಪರಿಶೀಲನಾ ವೇಳೆ ಸಹಾಯಕ ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ನಾಗಮಂಗಲ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರರು ಚೆಸ್ಕಾಂ ಇಲಾಖೆ, ನಾಗಮಂಗಲ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕು ಪಂಚಾಯತ್, ನಾಗಮಂಗಲ ರವರು ಪರಿಶೀಲನಾ ವೇಳೆಯಲ್ಲಿ ಹಾಜರಿದ್ದರು
