ಮಂಡ್ಯ: ಜೆಡಿಎಸ್-ಬಿಜೆಪಿ ಪಾದಯಾತ್ರೆಗೆ ಠಕ್ಕರ್ ಕೊಡಲು ಕಾಂಗ್ರೆಸ್ ಆ ೫, ೦೬ ರಂದು ಮಂಡ್ಯದಲ್ಲಿ ಜನಾಂದೋಲನ ಯಾತ್ರೆ ಸಮಾವೇಶವನ್ನು ಆಯೋಜಿಸಿದೆ.
ಆ.05 ರಂದು ಮದ್ದೂರು ಪಟ್ಟಣದಲ್ಲಿ ಕಾಂಗ್ರೆಸ್ ಸಮಾವೇಶ ನಡೆಯಲಿದೆ. ಆ.06 ರಂದು ಮಂಡ್ಯದ ಮಹಿಳಾ ಪಿಯು ಕಾಲೇಜಿನ ಕಲ್ಲುಕಟ್ಟಡ ಆವರಣದಲ್ಲಿ ಸಮಾವೇಶ ನಡೆಯಲಿದೆ.
ಕಾಂಗ್ರೆಸ್ ಸಮಾವೇಶದ ಮೂಲಕ ಜೆಡಿಎಸ್-ಬಿಜೆಪಿ ಪಾದಯಾತ್ರೆಗೆ ಮರೆಮಾಚಲು ಯತ್ನ.
ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಮಾವೇಶ ನಡೆಯಲ್ಲಿದ್ದು ಕಾರ್ಯಕ್ರಮಕ್ಕೆ ಹಾಸನ, ಚಿತ್ರದುರ್ಗದ ಕಾರ್ಯಕರ್ತರು ಆಗಮಿಸುತ್ತಾರೆ, ಜೆಡಿಎಸ್-ಬಿಜೆಪಿ ಯ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕಾನೂನು ಉಲ್ಲಂಘನೆ ಆಗದಿದ್ದರೂ ಮುಡಾ ಹಗರಣ ಆರೋಪ ಮಾಡ್ತಿದ್ದಾರೆ.
ಹಲವು ಹಗರಣದಿಂದ ಜೆಡಿಎಸ್-ಬಿಜೆಪಿ ಜನರಿಂದ ತಿರಸ್ಕೃತರಾಗಿದ್ದಾರೆ.ಬಿಜೆಪಿ-ಜೆಡಿಎಸ್ ಹಗರಣಗಳ ಹೊರ ತರಲಾಗುತ್ತದೆ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ.
ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಎಂದು ಸಿಡಿ ಗಂಗಾಧರ್ ಮನವಿ ಮಾಡಿದರು. ಕಾಂಗ್ರೆಸ್ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಸೇರಿ ಹಲವು ಸಚಿವರು ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.