ಮಂಡ್ಯ: ಭೀಮನ ಅಮಾವಾಸ್ಯೆಯ ಪ್ರಯುಕ್ತ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕಾರ್ಯ ವಿಜೃಂಭಣೆಯಿಂದ ನೆರವೇರಿಸಿದರು.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ಗವಿಮಠ. ಭೀಮನ ಅಮಾವಾಸ್ಯೆ ಪ್ರಯುಕ್ತ ಪ್ರಸಿದ್ಧ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಪವಾಡ ಪುರುಷ ಗವಿಮಠದ ಸಿದ್ಧಲಿಂಗೇಶ್ವರ ದೇವಾಲಯವನ್ನು ತಳಿರು ತೋರಣ ವಿವಿಧ ಬಗೆಯ ಫಲ ಪುಷ್ಪಗಳು ಹಾಗೂ ೧ ಸಾವಿರ ಒಬ್ಬಟ್ಟಿನಿಂದ ವಿಶೇಷ ಅಲಂಕಾರ, ಹಾಲಿನಅಭಿಷೇಕ, ಬಿಲ್ವಪತ್ರೆ , ಪಂಚಾಮೃತ ಅಭಿಷೇಕ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಒಳ ಆವರಣದಲ್ಲಿ ವಿವಿಧ ಫಲ ಪುಷ್ಪಗಳ ವಿಶೇಷವಾಗಿ ಒಬ್ಬಟ್ಟು ಮೂಲಕ ಸ್ವತಂತ್ರ ಸಿದ್ದಲಿಂಗೇಶ್ವರನಿಗೆ ಅಲಂಕಾರ ಮಾಡಲಾಗಿತ್ತು. ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಪೀಠಾಧ್ಯಕ್ಷರಾದ ಶ್ರೀ ಚನ್ನವೀರ ಮಹಾಸ್ವಾಮಿ ನೇತೃತ್ವದಲ್ಲಿ ಪೂಜಾ ಕೈಂಕಾರ್ಯ ಕೈಗೊಳ್ಳಲಾಯಿತು.
ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರು. ಒಬ್ಬಟ್ಟಿನ ವಿಶೇಷ ಅಲಂಕಾರ ನೋಡಿ ಭಕ್ತರು ಕಣ್ತುಂಬಿ ಕೊಂಡರು.