ಮಂಗಳೂರು: ಹಾಸನ- ಮಂಗಳೂರು ಮಾರ್ಗದ ಯಡಕುಮರಿ ಮತ್ತು ಕಡಗರವಳ್ಳಿ ಮಧ್ಯೆ ಹಳಿ ಮೇಲೆ ಭೂಕುಸಿತವಾಗಿರುವುದರಿಂದ ೧೨ ರೈಲುಗಳ ಸೇವೆಯನ್ನು ರದ್ದು ಪಡಿಸಲಾಗಿದೆ.
೧೬೫೧೧ ಕೆಎಸ್‌ಆರ್ ಬೆಂಗಳೂರು-ಕಣ್ಣೂರ ರೈಲು ಆ.೪ ಮತ್ತು ೫ರಂದು. ೧೬೫೧೨ ಕಣ್ಣೂರ-ಕೆಎಸ್‌ಆರ್ ಬೆಂಗಳೂರು ರೈಲಿನ ಸೇವೆಯನ್ನು ೫ ಮತ್ತು ೬ರಂದು ರದ್ದು ಪಡಿಸಲಾಗಿದೆ. ೧೬೫೯೫ ಕೆಎಸ್‌ಆರ್ ಬೆಂಗಳೂರು-ಕಾರವಾರ ಸ್ಪೇಷಲ್ ರೈಲು ೪ ಮತ್ತು ೫ರಂದು ಹಾಗೂ ೧೬೫೯೬ ಕಾರವಾರ-ಕೆಎಸ್‌ಆರ್ ಬೆಂಗಳೂರು ರೈಲು ೫ ಮತ್ತು ೬ರಂದು. ೧೬೫೮೫ ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸಪ್ರೆಸ್ ರೈಲು ೪ ಮತ್ತು ೫ರಂದು ಹಾಗೂ ೧೬೫೮೬ ಮುರುಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸಪ್ರೆಸ್ ರೈಲು ೫ ಮತ್ತು ೬ರಂದು. ೦೭೩೭೭ ವಿಜಯಪುರ-ಮಂಗಳೂರು ಸೆಂಟ್ರಲ್ ರೈಲು ೪ ಮತ್ತು ೫ರಂದು ಹಾಗೂ ೦೭೩೭೮ ಮಂಗಳೂರು ಸೆಂಟ್ರಲ್-ವಿಜಯಪುರ ರೈಲು ೫ ಮತ್ತು ೬ರಂದು. ೧೬೫೧೫ ಯಶವಂತಪುರ ಜಂಕ್ಷನ್-ಕಾರವಾರ ಎಕ್ಸಪ್ರೆಸ್ ರೈಲು ೫ರಂದು ಹಾಗೂ ೧೬೫೧೬ ಕಾರವಾರ-ಯಶವಂತಪುರ ಜಂಕ್ಷನ್ ಎಕ್ಸಪ್ರೆಸ್ ರೈಲು ೬ರಂದು. ೧೬೫೭೫ ಯಶವಂತಪುರ ಜಂಕ್ಷನ್-ಮಂಗಳೂರು ಜಂಕ್ಷನ್ ರೈಲು ೪ರಂದು ಹಾಗೂ ೧೬೫೭೬ ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ ರೈಲು ಸೇವೆಯನ್ನು ಆ.೫ರಂದು ರದ್ದುಪಡಿಸಲಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.