ಮಂಡ್ಯ: ಮಂಡ್ಯದಲ್ಲಿ ಮತ್ತೊಂದು ವಿಸಿ ನಾಲೆ ದುರಂತ ಸಂಭವಿಸಿದೆ. ಟ್ರಾಕ್ಟರ್ ಸಮೇತ ವಿಸಿ ನಾಲೆಗೆ ಬಿದ್ದ ವ್ಯಕ್ತಿ. ಮಂಡ್ಯ ಜಿಲ್ಲೆ ಪಾಂಡವಪುರದ ಕಾಳೇನಹಳ್ಳಿ ಬಳಿ ಘಟನೆ ನಡೆದಿದೆ.
ಕಾಳೇನಹಳ್ಳಿ ಗ್ರಾಮದ ನವೀನ್ ನಾಲೆಗೆ ಬಿದ್ದ ವ್ಯಕ್ತಿ.ನಾಲೆಗೆ ಬಿದ್ದ ನವೀನ್ ಗಾಗಿ ನೆನ್ನೆಯಿಂದ ಹುಡುಕಾಟ ನಡೆಸುತ್ತಿದ್ದರು. ನೀರು ಹೆಚ್ಚು ಇದ್ದ ಪರಿಣಾಮ ಬೆಳಗ್ಗೆಗೆ ಹುಡುಕಾಟ ಮುಂದೂಡಿಕೆ ಮಾಡಲಾಗಿತ್ತು.
ಈ ಹಿಂದೆ ಹಲವು ಬಾರಿ ವಿಸಿ ನಾಲೆ ದುರಂತ ನಡೆದಿದೆ. ವಿಸಿ ನಾಲೆಗೆ ಬಿದ್ದು ಅನೇಕರು ಸಾವನ್ನಪ್ಪಿದರು.
ಈಗ ಮತ್ತೊಮ್ಮೆ ವಿಸಿ ನಾಲೆಗೆ ಟ್ರಾಕ್ಟರ್ ಬಿದ್ದು ವ್ಯಕ್ತಿ ಸಾವು ಸಾವಿಗೀಡಾಗಿದ್ದಾನೆ.
ನಾಲಿಗೆ ಬಿದ್ದ ಟ್ರಾಕ್ಟರ್ ಪತ್ತೆ ಮಾಡಲಾಗಿದೆ. ಟ್ರಾಕ್ಟರ್ ಚಾಲಕ ನವೀನ್ ಗಾಗಿ ಶೋಧ ಕಾರ್ಯ ಮುಂದುವರೆದಿದೆ. ನೀರಿನಲ್ಲಿ ನವೀನ್ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ .
ಮೇಲುಕೋಟೆ ಪೊಲೀಸರಿಂದ ಶೋಧಕಾರ್ಯ ಮುಂದುವರೆದಿದೆ. ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.