ಮಂಡ್ಯ: ಮಂಡ್ಯ ನಗರದಲ್ಲಿಂದು ಕಾಂಗ್ರೆಸ್ ಜನಾಂದೋಲನ ಸಮಾವೇಶ ಮೈ ಶುಗರ್ ಮೈದಾನದಲ್ಲಿ ನಡೆಯಲಿದೆ . ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾವೇಶ ನಡೆಯಲಿದ್ದು, ಸಮಾವೇಶದಲ್ಲಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು ಹಾಗೂ ಶಾಸಕರು ಭಾಗಿಯಾಗಲಿದ್ದಾರೆ.
ನೆನ್ನೆ ಮದ್ದೂರಿನಲ್ಲಿ ಹೆಚ್ಡಿಕೆ ಹಾಗೂ ಬಿಜೆಪಿ ವಿರುದ್ದ ಗುಡುಗಿದ್ದ ಕೈ ನಾಯಕರು. ಇಂದು ಮಂಡ್ಯದಲ್ಲಿ ನಡೆಯಲಿರುವ ಬಿಜೆಪಿ-ಜೆಡಿಎಸ್ ಜಂಟಿ ಪಾದಯಾತ್ರೆಯಲ್ಲಿ ಕದನ ಕಲಿಗಳ ಬಿಗ್ ಫೈಟ್ ಗೆ ಸಕ್ಕರೆ ನಾಡು ಸಾಕ್ಷಿಯಾಗಲಿದೆ.
ಕಾಂಗ್ರೆಸ್-NDA ಮೈತ್ರಿ ಪಡೆಯ ಜಟ್ಟಿಕಾಳಗಕ್ಕೆ ಮಂಡ್ಯದಲ್ಲಿ ಅಖಾಡ ಸಜ್ಜಾಗಿದೆ. ಮೈತ್ರಿ ಹಾಗು ಕಾಂಗ್ರೆಸ್ ನಡುವೆ ಮೈಸೂರು ಚಲೋ V/S ಜನಾಂದೋಲನ ಫೈಟ್ ನಡೆಯಲಿದೆ. ಇಂದು ಮಂಡ್ಯದಲ್ಲಿ ಕಾಂಗ್ರೆಸ್ ನಿಂದ ಬೃಹತ್ ಜನಾಂದೋಲನ ಸಮಾವೇಶ ನಡೆಯಲಿದ್ದು ,ಇಂದು ಕೂಡ ಕೇಂದ್ರ ಸಚಿವ ಎಚ್ ಡಿ ಕೆ ವಿರುದ್ಧ ಡಿಕೆಶಿ ಅಬ್ಬರಿಸಲಿದ್ದಾರೆ.