ಮಂಡ್ಯ: ಮೂಡ , ವಾಲ್ಮೀಕಿ ನಿಗಮದಲ್ಲಿ ಅಭಿವೃದ್ಧಿ ಹಣವನ್ನ, ಪರಿಶಿಷ್ಟ ಜಾತಿ ಪಂಗಡದ ಹಣವನ್ನ ಕಾಂಗ್ರೆಸ್ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ಸೋಮನಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಜೆಡಿಎಲ್ ಪಿ ಸುರೇಶ್ ಬಾಬು, ಮಾಜಿ ಸಚಿವ ಪುಟ್ಟರಾಜು, ಡಿಸಿ ತಮ್ಮಣ್ಣ, ಎಮ್ ಎಲ್ ಸಿ ಬೋಜೆಗೌಡ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಸ್ಥಳೀಯ ನಾಯಕರು ಭಾಗಿಯಾಗಿದ್ದರು.
ನಂತರ ಸುದ್ದಿಗೋಷ್ಠಿಯಲ್ಲಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಮೂಡಗೆ ಸಂಬಂಧಿಸಿದಂತೆ ಸುಳ್ಳುದಾಖಲೆ ಸೃಷ್ಟಿ ಮಾಡಿ ೧೪ ಸೈಟ್ ಗಳನ್ನ ಪಡೆದುಕೊಂಡಿದ್ದಾರೆ. ಮೂಡ, ವಾಲ್ಮೀಕಿ ನಿಗಮದ ಅಭಿವೃದ್ಧಿ ಹಣ ದುರುಪಯೋಗ, ಎರಡು ವಿಷಯಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಇಬ್ಬರು ನಾಯಕರು ಪಾದಯಾತ್ರೆಗೆ ಚಾಲನೆ ಕೊಟ್ಟಿದ್ದಾರೆ. ಕೆಂಗಲ್ ನಿಂದ ನಿನ್ನೆ ನಿಡಘಟ್ಟಕ್ಕೆ ಬಂದಿದ್ದೇವೆ. ಟಿ ಬಿ ಸರ್ಕಲ್ ನಲ್ಲಿ ದೊಡ್ಡ ಸಭೆಯಿದೆ. ರೈತರು, ಸಂಘಟನೆಗಳು ನಮಗೆ ಸಾಥ್ ನೀಡಲಿವೆ ಎಂದು ಹೇಳಿದರು.
ನಿನ್ನೆ ಪಕ್ಷದ ಕಾರ್ಯಕರ್ತೆ ಗೌರಮ್ಮ ಎನ್ನೊವವರು ಹೃದಯಾಘಾತದಿಂದ ಮೃತಪಟ್ಟಿರೋದು ಮನಸ್ಸಿಗೆ ನೋವಾಗಿದೆ. ಎರಡು ಪಕ್ಷದ ಕಾರ್ಯಕರ್ತರು ಪ್ರತಿದಿನ ನಮ್ಮ ಜೊತೆ ಹೆಜ್ಜೆ ಹಾಕ್ತಿದ್ದಾರೆ. ಯಾದಗಿರಿಯಲ್ಲಿ ಪಿಎಸ್ ಐ ೪೦ ಲಕ್ಷ ವರ್ಗಾವಣೆಗೆ ಶಾಸಕರು ಹಾಗು ಅವರ ಮಗನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪರಶುರಾಮ್ ಅವರ ಪತ್ನಿ ಜೊತೆ ಕುಮಾರಸ್ವಾಮಿ ದೂರವಾಣಿ ಮಾತಾಡಿದ್ದಾರೆ. ಪಾದಯಾತ್ರೆ ಮುಗಿದ ಬಳಿಕ ಅಲ್ಲಿಗೆ ಹೋಗಿ ಅವರಿಗೆ ನ್ಯಾಯ ಕೊಡಿಸಲು ಜೆಡಿಎಸ್ ಹೋರಾಟ ಮಾಡುತ್ತೆ ಎಂದು ಹೇಳಿದರು.
ನೈತಿಕತೆ ಇದ್ರೆ ಸಿಎಂ ರಾಜೀನಾಮೆ ಕೊಡಲಿ
ಅಹಿಂದ ಹಿಂದುಳಿದ ವರ್ಗದ ಸಹಕಾರದಿಂದ ಸರ್ಕಾರ ಬಂದಿದೆ. ಆದ್ರೆ ಇವತ್ತು ಜನ ಚೀಮಾರಿ ಹಾಕ್ತಿದ್ದಾರೆ. ೧೮೭ ಕೋಟಿ ವಾಲ್ಮೀಕಿ ನಿಗಮದಲ್ಲಿ ಅಕ್ರಮವಾಗಿದೆ. ೮೨ ಕೋಟಿಹಗರಣ ಆಗಿದೆ ಅಂತ ಸಿಎಂ ಒಪ್ಪಿಕೊಂಡಿದ್ದಾರೆ. ಅವರಿಗೆ ನೈತಿಕತೆ ಇದ್ರೆ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಹಗರಣಗಳನ್ನ ಮುಚ್ಚಿಹಾಕಿಕೊಳ್ಳೊಕೆ ವಿಚಾರ ಡೈವರ್ಟ್
ಇಂದು ಮಂಡ್ಯದಲ್ಲಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ನಡೆಸುತ್ತಿರುವ ವಿಚಾರವಾಗಿ ಮಾತನಾಡಿ, ಜನಾಂದೋಲನದ ಮೂಲಕ ಹಗರಣಗಳನ್ನ ಮುಚ್ಚಿಹಾಕಿಕೊಳ್ಳೊಕೆ ವಿಚಾರ ಡೈವರ್ಟ್ ಮಾಡ್ತಿದ್ದಾರೆ
ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕುಟುಂಬದ ಪ್ರಶ್ನೆ ಅಲ್ಲಾ, ಪಕ್ಷದ ಗೌರವ ಪ್ರಶ್ನೆ
ಮುಂದುವರಿದು ಪ್ರೀತಮ್ ಗೌಡ ವಿಚಾರವಾಗಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಇದು ಕುಟುಂಬದ ಪ್ರಶ್ನೆ ಅಲ್ಲಾ, ಪಕ್ಷದ ಗೌರವ ಪ್ರಶ್ನೆ ಪಕ್ಷದ ವಿರುದ್ದ ಕೆಲಸ ಮಾಡಬಾರದು ಬಿಜೆಪಿ ಜೆಡಿಎಸ್ ಇಬ್ಬರು ಒಟ್ಟಾಗಿದ್ದೇವೆ. ಹಾಸನದಲ್ಲಿ ಸಮಸ್ಯೆ ಆಗಿತ್ತು ವ್ಯಕ್ತಿಗತವಾಗಿ ಮಾತಾಡೊಲ್ಲಾ, ಇದು ಬಿಜೆಪಿ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದರು.
ನಂತರ ಮಾಜಿ ಶಾಸಕ ಪಿ ರಾಜೀವ್ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ನಡೆದಿರುವ ಕಪ್ಪು ಚುಕ್ಕೆ ಇದು. ಅಧಿಕಾರಿಗಳ ಆತ್ಮಹತ್ಯೆ ನಡೆಯುತ್ತಿದೆ. ವಾಲ್ಮಿಕಿ ನಿಗಮದ ಅಧಿಕಾರಿ ಚಂದ್ರಶೇಖರ ಅವರ ಡೆಟ್ ನೋಟಿನಲ್ಲಿ ಸಚಿವರ ಹೆಸರಿತ್ತು. ಕಾಂಗ್ರೆಸ್ ಭ್ರಷ್ಟಾಚಾರ ರಕ್ಷಣೆ ಮಾಡ್ತಿದೆ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ರೆ ಸಿಎಂ ರಾಜೀನಾಮೆ ಕೊಡಬೇಕಿತ್ತು. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಸುರ್ಜೆವಾಲ ವೇಣುಗೋಪಾಲ ಅವರನ್ನ ಕಳಿಸಿ, ಸಿದ್ದರಾಮಯ್ಯ ಅವರನ್ನ ಇಳಿಸಿ ಇಲ್ಲಾ ಕಿಕ್ ಬ್ಯಾಕ್ ಕೊಡಿ ಅಂತ ಕೇಳ್ತಿದ್ದಾರೆ.
ಮೈತ್ರಿ ಧರ್ಮವನ್ನ ನಾವು ಪಾಲಿಸಿಕೊಂಡು ಹೋಗ್ತಿವಿ. ಜನತಾ ನ್ಯಾಯಲಯದ ಮುಂದೆ ಕಾಂಗ್ರೆಸ್ ಮನೋಭಾವನೆ ತೋರಿಸಿದ್ದೇವೆ. ಸಿದ್ದರಾಮಯ್ಯ ಅವರು ಮಾತು ಮಾತಿಗೆ ಲಾ ಓದಿದ್ದೇವೆ ಅಂತಾರೆ. ಅದು ಎಲ್ಲರಿಗೂ ಒಂದೇ ನ್ಯಾಯ ಅನ್ನೋದು ಗೊತ್ತಿರಬೇಕು. ಯಡಿಯೂರಪ್ಪ ಅವರ ಮೇಲೆ ಹಂಸರಾಜ್ ಭಾರದ್ವಾಜ್ ಅನುಮತಿ ನೀಡಿದ್ದಾಗ ಸಿದ್ದರಾಮಯ್ಯ ಏನ್ ಹೇಳಿದ್ರು ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ ಅದನ್ನ ನೋಡಿಕೊಳ್ಳಿ ಎಂದಿದ್ದರು ಎಂದು ಹೇಳಿದರು.