ಮೈಸೂರು : ಕರ್ನಾಟಕ ಸರಕಾರ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಹಾಗೂ ಇಂಡಿಯಾ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿ ಕಂಡಕ್ಟರ್ ಅಸೋಸಿಯೇಷನ್ ಸಹಭಾಗೀತ್ವದಲ್ಲಿ ದೇಶದ ಮೊದಲ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕೆ (ಇಎಸ್‌ಡಿಎಂ) ಟೆಕ್ ಯಾತ್ರೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಯಿತು.
ಮಂಗಳವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಮೈಸೂರು ಬಿಗ್ ಟೆಕ್ ಶೋ ೨೦೨೪, ೪ನೇ ಆವೃತ್ತಿ ಪೋಸ್ಟರ್ ಅನ್ನು ಆನಾವರಣಗೊಳಿಸಲಾಯಿತು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ವರ್ಚ್ಯುವೆಲ್ ಆಗಿ ಸಂದೇಶ ನೀಡಿ, ೧೫೦ ಎಕರೆಗಳಷ್ಟು ಪಿಸಿಬಿ ಕ್ಲಸ್ಟರ್ ಅನ್ನು ಸ್ಥಾಪಿಸುವ ಉದ್ದೇಶದಿಂದ ಪ್ರಸ್ತುತ ಪರೀಕ್ಷಾ ಸೌಲಭ್ಯವನ್ನು ವಿಸ್ತರಿಸಲು, ಮಲ್ಟಿಟೆನೆನ್ಸಿ ಕ್ಲೀನ್ ರೂಮ್ ಅನ್ನು ಸೇರಿಸಲು ಉದ್ದೇಶಿಸಿದ್ದೇವೆ. ಸುಮಾರು ೬೦೦ ಕೋಟಿ ರೂ.ಗಳ ಹೊಸ ಹೂಡಿಕೆ ಹರಿದು ಬಂದಿದ್ದು, ೫ ಸಾವಿರ ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ. ಅಷ್ಟೇ ಅಲ್ಲದೆ, ಮಹಿಳಾ ಉದ್ಯೋಗಿಗಳನ್ನು ಸಬಲೀಕರಣಗೊಳಿಸಲು ಸಹಕಾರವಾಗಲಿದೆ, ಈ ಎಲ್ಲಾ ಬೆಳವಣಿಗೆಯಿಂದ ಜಾಗತಿಕ ಕಂಪನಿಗಳು ಮೈಸೂರಿನಲ್ಲಿ ಬೆಳೆಯಲು ಇದು ಉತ್ತಮ ಸಮಯವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಮಾರಂಭದಲ್ಲಿದ್ದ ಏಕ್‌ರೂಪ್ ಕೌರ್ ಮಾತನಾಡಿ, ಜಾಗತಿಕ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳ ಜೊತೆ ಕೈ ಜೋಡಿಸಿರುವುದು ಮೈಸೂರು-ಬೆಂಗಳೂರನ್ನು ಸೆಮಿಕಾನ್ ಹಬ್ ಆಗಿ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಲಿದೆ. ಮೈಸೂರು ಸೆಮಿಕಾನ್ ತಯಾರಿಕೆ ಕ್ಷೇತ್ರದಲ್ಲಿ ಹಾಗೂ ಬೆಂಗಳೂರು ಸೆಮಿಕಾನ್ ವಿನ್ಯಾಸ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಬೆಳೆಯಲಿವೆ ಎಂದು ತಿಳಿಸಿದರು.
ಹೊಸ ಕಾಯಿದೆಗಳು ಪ್ರತಿ ಹಂತದಲ್ಲೂ ಉದ್ಯಮಕ್ಕೆ ಬೇಕಾಗುವ ಎಲ್ಲಾ ಸವಲತ್ತುಗಳನ್ನು ನೀಡುತ್ತಾ, ಕರ್ನಾಟಕದ ಆರ್ಥಿಕತೆಗೆ ಸಹಕಾರಿಯಾಗಿದೆ.ಇತ್ತೀಚಿನ ಏಲಿವೆಟ್ ಕಾರ್ಯಕ್ರಮ ೯೨೩ ಸ್ಟಾರ್ಟ್ ಅಪ್ ಗಳಿಗೆ ಒಟ್ಟು ೨೨೩ ಕೋಟಿಗಳಷ್ಟು ಸಹಾಯ ಮಾಡಿದೆ ಅದರಲ್ಲಿ ಸುಮಾರು ೪೦ ಸ್ಟಾರ್ಟ್ ಅಪ್ ಗಳು ಮೈಸೂರಿನವಾಗಿದೆ ಎಂದು ತಿಳಿಸಿದರು.
ಬಿವಿ ನಾಯ್ಡು, ಡಾ. ವಿ, ವೀರಪ್ಪನ್ ಸೇರಿದಂತೆ ಅಂತರಾಷ್ಟ್ರೀಯ, ದೇಶಿಯ ಹಾಗೂ ಮೈಸೂರಿನ ಹಲವಾರು ಕಂಪನಿಗಳ ಪ್ರತಿನಿಧಿಗಳು, ರುಚಿ ಬಿಂದಾಲ್, ಐಎಎಸ್, ಪರಿಣಿಕ ಪವನ್ ರಾಮ್ ಕೆಎಎಸ್, ಕೆಡೆಮ್ ಸಂಸ್ಥೆಯ ಸುಧೀರ್, ಗೌರವ್, ಸಂಜಯ್ ಗುಪ್ತಾ, ಚೇತನ್ ಹಾಗೂ ಮೊದಲಾದವರು ಇದ್ದರು.