Saturday, April 19, 2025
Google search engine

Homeಅಪರಾಧರೇಣುಕಾಸ್ವಾಮಿ ಹತ್ಯೆ ಕೇಸ್ : ದರ್ಶನ್ & ಗ್ಯಾಂಗ್ ವಿರುದ್ಧ 66 ಸಾಕ್ಷ್ಯ ಸಂಗ್ರಹ!

ರೇಣುಕಾಸ್ವಾಮಿ ಹತ್ಯೆ ಕೇಸ್ : ದರ್ಶನ್ & ಗ್ಯಾಂಗ್ ವಿರುದ್ಧ 66 ಸಾಕ್ಷ್ಯ ಸಂಗ್ರಹ!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಬರೋಬ್ಬರಿ ೬೬ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎನ್ನುವ ಮಾಹಿತಿ ಬಂದಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮುಂದಿನ ವಾರ ಮಹತ್ವದ ಸಾಕ್ಷ್ಯಗಳ ಎಫ್ ಎಸ್ ಎಲ್ ವರದಿ ಕೈ ಸೇರಲಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಎಫ್‌ಎಸ್‌ಎಲ್ ಗೆ ಕಳುಹಿಸಲಾಗಿರುವ ಕೆಲವು ಸಾಕ್ಷ್ಯಗಳ ವರದಿ ಮುಂದಿನ ವಾರ ಬರಲಿವೆ.

ಮುಖ್ಯವಾಗಿ ಪಟ್ಟಣಗೆರೆ ಶೆಡ್ ನಲ್ಲಿ ಸಿಕ್ಕ ೨ ಮಾದರಿಗಳು, ಸ್ಕಾರ್ಪಿಯೋ ಕಾರಿನಲ್ಲಿ ಆರೋಪಿಗಳ ಫಿಂಗರ್ ಪ್ರಿಂಟ್, ಪವಿತ್ರಾಗೌಡ, ನಟ ದರ್ಶನ್ ಮನೆಯ ಸಿಸಿಟಿವಿಯ ವಿಡಿಯೋಗಳು, ಪಟ್ಟಣಗೆರೆ ಶೆಡ್ ನ ಸೆಕ್ಯೂರಿಟಿ ಗಾರ್ಡ್ ಸಿಸಿಟಿವಿ ದೃಶ್ಯವಳಿಗಳು, ಕೊಲೆ ಆರೋಪಿಗಳ ಮೊಬೈಲ್ ಮಾಹಿತಿ ಕುರಿತು ಎಫ್ ಎಸ್ ಎಲ್ ವರದಿ ಬರಲಿದೆ.

ಪ್ರಕರಣ ಸಂಬಂಧ ಈಗಾಗಲೇ ಪೊಲೀಸರು ಸಂಗ್ರಹಿಸಿರುವ ಸಿಸಿಟಿವಿ ದೃಶ್ಯಗಳ ವಿಶೂವಲ್ ಕಂಪ್ಯಾರಿಸನ್ ಗೆ ಎಫ್ ಎಸ್ ಎಲ್ ಗೆ ಕಳುಹಿಸಲಾಗಿದ್ದು, ಸಿಸಿಟಿವಿ ದೃಶ್ಯದ ಜೊತೆಗೆ ಆರೋಪಿಗಳ ಫೋಟೋಗಳನ್ನು ಕಳುಹಿಸಲಾಗಿದೆ. ಇದರಲ್ಲಿ ಎಲ್ಲಾ ಆರೋಪಿಗಳ ಕಣ್ಣು, ಬಣ್ಣ, ದೇಹ, ಬಾಯಿ, ತುಟಿ, ಮೂಗಿನ ಶೇಪ್ ಗಳ ಕಂಪ್ಯಾರಿಸನ್ ಮಾಡಲು ಮುಂದಾಗಿದೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular