Sunday, April 20, 2025
Google search engine

Homeಸ್ಥಳೀಯಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ವಿರುದ್ದ ಆರೋಪ ಸತ್ಯಕ್ಕೆ ದೂರ: ಡಾ.ಕೆ.ಆರ್.ಮಹೇಂದ್ರಪ್ಪ

ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ವಿರುದ್ದ ಆರೋಪ ಸತ್ಯಕ್ಕೆ ದೂರ: ಡಾ.ಕೆ.ಆರ್.ಮಹೇಂದ್ರಪ್ಪ

ಕೆ.ಆರ್.ನಗರ: ಪಟ್ಟಣದ ಸಿ.ಎಂ. ರಸ್ತೆಯಲ್ಲಿರುವ ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ಬಗ್ಗೆ ಸಾಮಾಜಿಕ ಜಾಲತಾಣ ಸೇರಿದಂತೆ ಇತರ ಸುದ್ದಿ ಮಾಧ್ಯಮಗಳಲ್ಲಿ ಭಿತ್ತರಗೊಂಡಿರುವುದು ಸತ್ಯಕ್ಕೆ ದೂರವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ ಹೇಳಿದರು.
ನಗರದ ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಮಟ್ಟದ ಸಮನ್ವಯ ಸಮಿತಿ ಅಧ್ಯಕ್ಷರಾದ ತಹಶೀಲ್ದಾರ್‌ರವರ ನೇತೃತ್ವದಲ್ಲಿ ಜೂನ್ ೨೨ರಂದು ಸಮಿತಿ ಸದಸ್ಯರೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣದಡಿಯಲ್ಲಿ ಈ ಹೋಟೆಲ್ ಮೇಲೆ ದಾಳಿ ಮಾಡಲಾಯಿತು. ಪುರಸಭೆ ಅಧಿಕಾರಿಗಳು ಮತ್ತು ತಾವು ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅಡುಗೆ ಮನೆ ಸೇರಿದಂತೆ ಹೋಟೆಲ್‌ನಲ್ಲಿ ಸ್ವಚ್ಚತೆ ಇರುವುದಿಲ್ಲ ಇದರ ಜತೆಗೆ ಫ್ರೀಜರ್‌ನಲ್ಲಿ ಹಳೆ ಮಾಂಸ ಇದದ್ದು ಕಂಡು ಬಂದಿತ್ತು ಈ ಬಗ್ಗೆ ಹೋಟೆಲ್‌ನವರಿಗೆ ಎಚ್ಚರಿಕೆ ನೀಡಿ ೬೪೦೦ ರೂಗಳನ್ನು ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹೋಟೆಲ್‌ನಲ್ಲಿ ದನದ ಮಾಂಸ ಮತ್ತು ನಾಯಿ ಮಾಂಸ ಇರುವುದಿಲ್ಲ ಆದರೂ ಸಾಮಾಜಿಕ ಜಾಲ ತಾಣಗಳು ಮತ್ತು ಯೂಟೂಬ್ ಚಾನೆಲ್‌ಗಳಲ್ಲಿ ಈ ರೀತಿಯ ಸುಳ್ಳು ಸುದ್ದಿ ಹರಿದಾಡಿದೆ ಅದಕ್ಕಾಗಿ ಈ ಸ್ಪಷ್ಪನೆ ನೀಡುತ್ತಿದ್ದೇವೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ?: ಕೆ.ಆರ್.ನಗರ: ಜೂನ್ ೨೨ರಂದು ನಡೆದ ಗಣೀಸ್ ಫ್ಯಾಮಿಲಿ ರೆಸ್ಟೋರೆಂಟ್ ಮೇಲಿನ ದಾಳಿಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ.ಆರ್.ಮಹೇಂದ್ರಪ್ಪ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ವ್ಯಕ್ತವಾಗಿದೆ. ದಾಳಿಯ ವೇಳೆ ವಶಪಡಿಸಿಕೊಂಡ ಮಾಂಸವನ್ನು ಸಿಎಫ್‌ಟಿಆರ್‌ಐನಲ್ಲಿ ಪರೀಕ್ಷೆಗೆ ಒಳಪಡಿಸಿ ಅದರ ವರದಿಯನ್ನು ಪಡೆಯದೆ ಕಳೆದ ತಿಂಗಳು ನಡೆಸಿರುವ ದಾಳಿಯ ಬಗ್ಗೆ ಪತ್ರಿಕಾಗೋಷ್ಠಿ ನಡೆಸುವ ಅವಶ್ಯಕತೆ ಏನಿತ್ತು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರೆಸ್ಟೋರೆಂಟ್‌ನಲ್ಲಿ ದನದ ಹಾಗೂ ನಾಯಿ ಮಾಂಸಗಳನ್ನು ಬಳಸುತ್ತಿದ್ದರು ಎಂದು ಆರೋಗ್ಯಾಧಿಕಾರಿಗಳು ಅಂದು ಹೇಳಿಕೆ ನೀಡಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಈ ರೀತಿ ಹರಿದಾಡಿತ್ತು. ಗಣೀಸ್ ರೆಸ್ಟೋರೆಂಟ್‌ನವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಬೇಕಿತ್ತು. ಹಾಗೂ ಜೂನ್ ೨೨ ರಂದು ಹಲವು ಹೋಟೆಲ್‌ಗಳ ಮೇಲೆ ದಾಳಿಯಾಗಿದ್ದು ಪತ್ರಿಕಾಗೋಷ್ಠಿಯಲ್ಲಿ ಗಣೀಸ್ ಹೊಟೇಲ್ ಬಗ್ಗೆ ಮಾತ್ರ ಸ್ಪಷ್ಟನೆ ನೀಡಿರುವ ಆರೋಗ್ಯಾಧಿಕಾರಿಗಳ ನಡೆಯ ಬಗ್ಗೆ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡಿವೆ.

RELATED ARTICLES
- Advertisment -
Google search engine

Most Popular