Thursday, September 11, 2025
Google search engine

Homeರಾಜಕೀಯಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿ: ಆರ್​ ಅಶೋಕ್​ ದಾಖಲೆ ಸಮೇತ ಆರೋಪ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಭಾಗಿ: ಆರ್​ ಅಶೋಕ್​ ದಾಖಲೆ ಸಮೇತ ಆರೋಪ

ಮಂಡ್ಯ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ದಾಖಲೆ ಸಮೇತ ಆರೋಪ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂಡಾದಲ್ಲಿ 14 ಸೈಟ್ ತಗೊಂಡಿರೋದು, ಇದು ಯಾರ ಜಮೀನು. ಇದು ನಿಂಗ ಎಂಬುವವರಿಗೆ ಸೇರಿದ ಜಮೀನಾಗಿದೆ. ನಿಂಗ ಎಂಬುವರು 1936 ನೇ ಇಸವಿಯಲ್ಲಿ 1 ರೂಪಾಯಿಗೆ ತೆಗೆದುಕೊಂಡಿದ್ರು. ಇದಾದ ನಂತರ ನಿಂಗ ಎಂಬುವವರು ಸಾವನ್ನಪ್ಪಿದ್ರು. ನಿಂಗ ಅವರ ಪತ್ನಿ ನಿಂಗಮ್ಮ ಅವರು 1990ರಲ್ಲಿ ನಿಧನರಾದರು. ನಿಂಗ ಕುಟುಂಬಸ್ಥರ ವಂಶದಲ್ಲಿ 27 ಜನರು ಇದ್ದಾರೆ. ಆದ್ರೆ ಸಿದ್ದರಾಮಯ್ಯ ಬಾಮೈದಾ ಲಿಂಗ ಅವರ ಮೂವರು ಪುತ್ರರಲ್ಲಿ ದೇವರಾಜು ಎಂಬುವವನಿಂದ ಮಾತ್ರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಆದರೆ, ಸುಪ್ರಿಂ ಕೋರ್ಟ್​ ಆದೇಶದ ಪ್ರಕಾರ ಇದು ನಿಯಮ ಬಾಹಿರವಾಗಿದೆ. ಒಬ್ಬರ ಕೈಯಿಂದ ಸಹಿ ಹಾಕಿಸಿಕೊಂಡು ರಿಜಿಸ್ಟರ್ ಮಾಡಿಕೊಳ್ಳಲು ಆಗಲ್ಲ. ಅಂದು ಬಡಾವಣೆಗೆ 462 ಎಕರೆ ಜಮೀನು ನಿಗದಿ ಮಾಡಲಾಗಿತ್ತು.ದೇವರಾಜು ಎಂಬಾತ ತನ್ನ ಕುಟುಂಬಸ್ಥರಿಂದ ಖಾಲಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಾನೆ. ಈ ವೇಳೆ ನಿಂಗ ಕುಟುಂಬಸ್ಥರು ಪರಿಹಾರ ತೆಗೆದುಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಸಿದ್ದರಾಮಯ್ಯ ನಿಯಮ ಬಾಹಿರವಾಗಿ ಭೂಸ್ವಾದಿನ ಮಾಡಿಕೊಂಡಿದ್ದಾರೆ.

2001ರಲ್ಲಿ 11.58 ಕೋಟಿಗೆ ಬಡಾವಣೆ ಅಭಿವೃದ್ಧಿಗೆ ಹಣ ಬಿಡುಗಡೆ ಆಯ್ತು. 2004ರಲ್ಲಿ 3.15 ಗುಂಟೆಯನ್ನು ಸಿದ್ದರಾಮಯ್ಯ ಅವರ ಬಾಮೈದ ಅಕ್ರಮವಾಗಿ ಕ್ರಯ ಮಾಡಿಕೊಳ್ಳುತ್ತಾರೆ. 2005 ರಿಂದ ವ್ಯವಸಾಯ ಭೂಮಿಯಿಂದ ನಿವೇಶನದ ಭೂಮಿಯಾಗಿ‌ ಪರಿವರ್ತನೆ ಆಗುತ್ತೆ. 2001ರಲ್ಲಿ ಬಡಾವಣೆ ಕೆಲಸ ನಡೆಯುತ್ತಿರುತ್ತೆ, ಆದ್ರೆ 2005 ರಲ್ಲಿ ಪರಿವರ್ತನೆ ಆಗುತ್ತೆ. ಡಿಸಿ, ತಹಶಿಲ್ದಾರ್ ಎಲ್ಲರೂ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದಿದ್ದಾರೆ.

2005ರಲ್ಲಿ ಮೂಡಾ ಇಲ್ಲಿ ಯಾವುದೇ ಕಟ್ಟಡ ಕಟ್ಟುವಂತಿಲ್ಲ ಎಂದು ಆದೇಶ ಮಾಡಿದ್ದಾರೆ. ಆಗಿನ ಡಿಸಿಗೆ ಇದ್ಯಾವುದು ಸಹ ಕಂಡಿಲ್ಲ. 2003ರಲ್ಲಿ ಭೂ ಪರಿವರ್ತನೆ ಆಗುವ ಮುನ್ನವೇ 12 ಸೈಟ್‌ಗಳನ್ನು ಅಲರ್ಟ್ ಮಾಡಲಾಗಿದೆ. ಇಷ್ಟೇಲ್ಲಾ ಸಾಮಾನ್ಯ ಮನುಷ್ಯ ಮಾಡಲು ಸಾಧ್ಯವಾಗಲ್ಲ.

2010ರಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಅವರ ಅಣ್ಣ ಅರಿಶಿಣ ಕುಂಕುಮಕ್ಕೆ 3.16 ಎಕರೆ ಜಮೀನು ನೀಡಲಾಗುತ್ತೆ. 2014ರಲ್ಲಿ ಪಾರ್ವತಿ ಅವರು ಮೂಡಾಗೆ ಪತ್ರೆ ಬರೆಯುತ್ತಾರೆ. ನನಗೆ ಬಂದ ಜಮೀನಿನಲ್ಲಿ ನೀವು ಬಡಾವಣೆ ಮಾಡಿದ್ದೀರಾ. ಬದಲಿ ಜಾಗವನ್ನು ನನಗೆ ನೀಡಿ ಎಂದು ಪತ್ರದಲ್ಲಿ ಉಲ್ಲೇಖ ಮಾಡ್ತಾರೆ.
2014 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು, ಆಗ 50:50 ಅನುಪಾತದಲ್ಲಿ ಹಂಚಿಕೆ ಮಾಡಲಾಗುತ್ತದೆ ಎಂದು ನಿಯಮ ಜಾರಿಗೆ ತಂದರು. 2017ರಲ್ಲಿ ಮುಡಾದಲ್ಲಿ ಪಾರ್ವತಿ ಅವರ ಜಾಮೀನಿನ ವಿಚಾರ ಚರ್ಚೆಗೆ ಬರುತ್ತದೆ. ಆಗ 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಲು ನಿರ್ಧಾರ ಮಾಡಲಾಗುತ್ತದೆ. ಇದಾದ ನಂತರ ಪಾರ್ವತಿ ಅವರಿಗೆ ಸೈಟ್ ನೀಡಲಾಗಿದೆ.

ಆದ್ದರಿಂದ ಮುಡಾ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಹಾಗೂ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರ್ ಅಶೋಕ್ ಆಗ್ರಹಿಸಿದರು.

ಅಕ್ವೇರ್ ಆಗಿರುವ ಜಮೀನೆ ಬೇರೆ. ಇವರು 50:50 ಯಲ್ಲಿ ಸೈಟ್ ಪಡೆದಿದ್ದೆ ಬೇರೆ ಕಡೆ ಇದೆ. ಅದಕ್ಕೆ ಒತ್ತಡ ಹಾಕಿದವರು ಯಾರು?. ಸೈಟ್ ಇಲ್ಲ ಎಂದರೇ ಬೇರೆ ಕಡೆ ಸೈಟ್ ಕೊಡುವುದು ಸರಿ. ಈಗಲೂ ಸೈಟ್ ಖಾಲಿಯಿದ್ದರೂ ಯಾಕೆ ಕೊಡಲಿಲ್ಲ. ಮುಡಾ ಎಂದರೇ ಕಳ್ಳ ಕಾಕರ ಅಡ್ಡ ಅಂದಿದ್ದಾರೆ. ಸಿದ್ದರಾಮಯ್ಯ ಜಮೀನ್ ಪಕ್ಕದ 4 ಎಕರೆ ಜಮೀನು ಅಕ್ವೇರ್ ಆಗಿದೆ‌. ಅದರಲ್ಲಿ 10 ಗುಂಟೆ ಮಾತ್ರ ಡಿನೋಟಿಫಿಕೇಷನ್ ಮಾಡಿದ್ದಾರೆ. 526 ಸೈಟ್ ಖಾಲಿ ಇದೆ, ಅಲ್ಲಿಯೇ ಸೈಟ್ ಕೊಡಬಹುದಿತ್ತಲ್ಲ ಎಂದರು.

ಇದರಿಂದಲೇ ಗೊತ್ತಾಗುತ್ತಿದೆ ಮುಡಾ ಪ್ರಕರಣದ ಪ್ರತಿಹಂತದಲ್ಲಿ ಸ್ವಜನಪಕ್ಷಪಾತ, ಭ್ರಷ್ಟಚಾರ ಎದ್ದು ಕಾಣುತ್ತಿದೆ ಎಂದರು..

ನಾನು ಕೇಳಿದ್ನ ಕೊಡಿ ಅಂತಾ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ಲಾಯರ್ ಓದಿದ್ದೀನಿ ಅಂತೀರಾ, ಎರಡು ವರ್ಷ ಪಾಠ ಮಾಡಿದ್ದೀನಿ ಅಂತೀರಾ‌. ಬೇರೆ ಕಡೆ ಖಾಲಿ ಇದೆ ಎಂದು ಸೈಟ್ ಬರೆಸಿಕೊಳ್ತೀರಾ?.ಎಂದು ಸಿದ್ದರಾಮಯ್ಯ ದಾಟಿಯಲ್ಲಿ ಆರ್ ಅಶೋಕ್ ಪ್ರಶ್ನಿಸಿದರು.

ಕೇವಲ 14 ಸೈಟ್ ಮಾತ್ರ ನುಂಗಿಲ್ಲ, ಸಿದ್ದರಾಮಯ್ಯ ಬೆಂಬಲಿಗರು 500 ಕ್ಕೂ ಹೆಚ್ಚು ಸೈಟ್ ನುಂಗಿದ್ದಾರೆ.
50:50 ಸ್ಕೀಮ್ ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ.ಇದನ್ನ ಮುಡಾ ಅಧ್ಯಕ್ಷ ಮರೀಗೌಡನೆ ಪತ್ರದ ಮೂಲಕ ತಿಳಿಸಿದ್ದಾನೆ.82 ಸಾವಿರ ನಾಗರೀಕರು ಸೈಟ್ ಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಬೇಕು‌. ಸಿದ್ದರಾಮಯ್ಯ ಪಡೆದಿರುವ 14 ಸೈಟ್ ಅನ್ನೂ ವಾಪಸ್ಸು ನೀಡಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರ್ ಅಶೋಕ ಒತ್ತಾಯಿಸಿದರು.

















RELATED ARTICLES
- Advertisment -
Google search engine

Most Popular