ಮೈಸೂರು: ಭಾರತದ ಪ್ರತಿಷ್ಠಿತ ಪೋಟೋಗ್ರಫಿ ಸಂಸ್ಥೆ ಆದಂತಹ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ (FIP) ಯವರು ಪ್ರತಿ ವರ್ಷವೂ ನಡೆಸುವಂತಹ ಉನ್ನತ ಸಾಧನೆಯಾದ AFIP ಡಿಸ್ಟಿಂಕ್ಷನ್ ಅನ್ನು ಮೈಸೂರಿನ ಮೂರು ಜನರು ತಮ್ಮದಾಗಿಸಿಕೊಂಡಿದ್ದಾರೆ.
- ಶಿವಕುಮಾರ್ ಬಿ ( ಸ್ನೇಕ್ ಶಿವು )
- ಸಿದ್ದಲಿಂಗ ಪ್ರಸಾದ್ ಕೆ ಜಿ
- ಇಗ್ನೇಶಿಯಸ್ ಸುನಿಲ್
ಈ ಪದವಿಯನ್ನು ಪಡೆಯಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದಿರಬೇಕು, ಹಾಗೂ ಫೆಡರೇಷನ್ ಆಫ್ ಇಂಡಿಯನ್ ಫೋಟೋಗ್ರಫಿ ಯಾ ಸದಸ್ಯತ್ವವನ್ನು ಪಡೆದಿರಬೇಕಾಗಿರುತ್ತದೆ. AFIP ಡಿಸ್ಟಿಂಕ್ಷನ್ ಅನ್ನು ಪಡೆಯಲು ಈವರೆಗೆ ಪಡೆದಿರುವಂತಹ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಬಹುಮಾನಗಳ ಮಾನದಂಡವನ್ನು ಆಧರಿಸಿ ಡಿಸ್ಟಿಂಕ್ಷನ್ ಅನ್ನು ನೀಡಲಾಗುತ್ತದೆ.