Saturday, April 19, 2025
Google search engine

Homeವಿದೇಶಬಾಂಗ್ಲಾ ಹಿಂಸಾಚಾರ: ನಟ ಶಾಂತೊ ಖಾನ್, ನಿರ್ಮಾಪಕ ಸಲೀಮ್ ಖಾನ್ ಹತ್ಯೆ

ಬಾಂಗ್ಲಾ ಹಿಂಸಾಚಾರ: ನಟ ಶಾಂತೊ ಖಾನ್, ನಿರ್ಮಾಪಕ ಸಲೀಮ್ ಖಾನ್ ಹತ್ಯೆ

ಕೋಲ್ಕತ್ತ: ಬಾಂಗ್ಲಾದೇಶದಲ್ಲಿನ ಹಿಂಸಾಚಾರದಲ್ಲಿ ನಟ ಶಾಂತೊ ಖಾನ್ ಹಾಗೂ ಅವರ ತಂದೆ, ನಿರ್ಮಾಪಕ ಸಲೀಮ್ ಖಾನ್ ಅವರನ್ನು ಹತ್ಯೆ ಮಾಡಲಾಗಿದೆ.

ಬಾಲಿಯಾ ಯೂನಿಯನ್ ನಲ್ಲಿರುವ ಫರಕ್ಕಾಬಾದ್ ಬಜಾರ್ ಗೆ ಸೆಲಿಮ್ ಮತ್ತು ಶಾಂಟೊ ತಮ್ಮ ಹಳ್ಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಎಂದು ತಿಳಿಸಿವೆ. ಸ್ಥಳೀಯರು ಅವರನ್ನು ತಡೆಯಲು ಪ್ರಯತ್ನಿಸಿದಾಗ, ಅವರು ತಪ್ಪಿಸಿಕೊಳ್ಳಲು ಗುಂಡು ಹಾರಿಸಿದರು. ಆದರೆ, ಸಮೀಪದ ಬಗರಬಜಾರ್ ಪ್ರದೇಶವನ್ನು ತಲುಪಿದಾಗ, ಆಕ್ರೋಶಗೊಂಡ ಗುಂಪು ಅವರನ್ನು ಹಿಡಿದು ಕೊಂದಿತು ಎಂದು ಹೇಳಲಾಗಿದೆ.

ಪಶ್ಚಿಮ ಬಂಗಾಳದ ಚಿತ್ರೋದ್ಯಮದ ಸದಸ್ಯರು ಈ ಹತ್ಯೆಯನ್ನು ಖಚಿತಪಡಿಸಿದ್ದು, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಶಾಂತೊ ಖಾನ್ ಜೊತೆ ಕೆಲಸ ಮಾಡಿದ್ದ ಬಂಗಾಳದ ನಟರು ಹತ್ಯೆಯ ಕಾರಣಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು ಅವು ಬೇರೆ ದೇಶದ ಆಂತರಿಕ ವಿಷಯಗಳಾಗಿವೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular