ಮೈಸೂರು : ಜನ ಸಾಮಾನ್ಯರ ಬದುಕಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಕಡಿಮೆ ಮಾಡಲು ಸಂಸದ ಸುನಿಲ್ ಬೋಸ್, ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಆರೋಗ್ಯ ಎಂಬುದು ಪ್ರತಿಯೊಬ್ಬರ ಮೂಲಭೂತ ಹಕ್ಕಾಗಿದ್ದು, ಈ ಹಕ್ಕುಗಳ ರಕ್ಷಣೆಯು ಸರ್ಕಾರದ ಜವಾಬ್ದಾರಿ ಆಗಿದೆ. ಈ ಹಿನ್ನಲೆಯಲ್ಲಿ ಆರೋಗ್ಯ ಹಾಗೂ ಜೀವ ವಿಮೆಯ ಮೇಲೆ ಅತ್ಯಂತ ಹೆಚ್ಚಿನ ರೀತಿಯಲ್ಲಿ ವಿಧಿಸಲಾಗುತ್ತಿರುವ ಜಿಎಸ್‌ಟಿ ತೆರಿಗೆಯನ್ನು ಕಡಿಮೆಗೊಳಿಸಿದರೆ ಜನರ ಬದುಕಿಗೆ ಸಹಾಯ ಮಾಡಿದಂತೆ ಆಗುತ್ತದೆ. ಈ ಬಗ್ಗೆ ನಾನು ಈಗಾಗಲೇ ಬಜೆಟ್ ಸದನದಲ್ಲಿ ಪ್ರಸ್ತಾಪ ಮಾಡಿದ್ದು ಕೇಂದ್ರ ವಿತ್ತ ಸಚಿವವರಲ್ಲಿ ಈ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದೇನೆ ಎಂದರು.
ಆರೋಗ್ಯ ವಲಯವು ಸರ್ವವ್ಯಾಪಿಯಾಗಿದ್ದು ಇದರ ಮೇಲಿನ ಜಿಎಸ್‌ಟಿ ತೆರಿಗೆ ಇಳಿಕೆಯಿಂದ ಜನರಿಗೆ ನಿಜಕ್ಕೂ ಸಹಾಯವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ, ಇದರ ಜೊತೆಗೆ ನಮ್ಮ ಚಾಮರಾಜನಗರ ಕ್ಷೇತ್ರಕ್ಕೂ ಸುಸಜ್ಜಿತ ಟ್ರಾಮಾ ಕೇರ್ ಸೆಂಟರ್‌ನ ಅಗತ್ಯವಿದ್ದು ಇದರ ಮಂಜೂರಾತಿಗಾಗಿ ಪೂರಕ ಪ್ರಯತ್ನಗಳನ್ನು ಸಂಸದನಾಗಿ ಮಾಡಲಿದ್ದೇನೆ ಎಂದು ಬೋಸ್ ತಿಳಿಸಿದರು.