ಮೈಸೂರು : ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿರ್ಮಾಣವಾಗುತ್ತಿರುವ ಚಿತ್ರನಗರಿ ಬಡಾವಣೆಗೆ
ಕನ್ನಡಪರ ಹೋರಾಟಗಾರ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾರ ಗೋವಿಂದ್ ಭೇಟಿ ನೀಡಿ ಬಡಾವಣೆಯನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಅವರು ಬಡಾವಣೆಯ ದಾಖಲೆಗಳನ್ನೂ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ, ಕನ್ನಡ ಚಿತ್ರರಂಗದ ನಟ, ನಟಿಯರು, ಕಲಾವಿದರು ಮತ್ತು ತಂತ್ರಜ್ಞರು ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆದಿರುವ ಬಗ್ಗೆ ಸಂಘದ ಪದಾಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಡಿ.ಕೆ. ರಾಮಕೃಷ್ಣ ಪ್ರವೀಣ್, ಚಲನಚಿತ್ರ ಮೀಡಿಯಾ ಸಂಪಾದಕರಾದ ವೀರೇಶ್ ಅವರಿಗೆ ನಂದಗೋಕುಲ ಗೃಹ ನಿರ್ಮಾಣ ಸಹಕಾರ ಸಂಘದ ಸದಸ್ಯತ್ವ ನೀಡಲಾಯಿತು. ಸಹಕಾರ ಸಂಘದ ಸಂಸ್ಥಾಪಕರಾದ ಮೈಸೂರು ಶಿವಾಜಿ ಇದ್ದರು.