ದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ಹಿರಿಯ ಸಹೋದ್ಯೋಗಿ ಮನೀಶ್ ಸಿಸೋಡಿಯಾಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರುವುದನ್ನು ಆಮ್ ಆದ್ಮಿ ಪಕ್ಷದ ಅತಿಶಿ ಇಂದು ಶುಕ್ರವಾರ ಸ್ವಾಗತಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ತೀರ್ಪು ದೆಹಲಿ ಶಿಕ್ಷಣ ಕ್ರಾಂತಿಯನ್ನು ರೂಪಿಸಿದ ವ್ಯಕ್ತಿಗೆ ಮನೀಶ್ ಸಿಸೋಡಿಯಾ ಸಿಕ್ಕ ಗೆಲುವು ಎಂದು ಶಿಕ್ಷಣ ಸಚಿವೆ ಅತಿಶಿ ಹೇಳಿದ್ದಾರೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಮನೀಶ್ ಸಿಸೋಡಿಯಾ ೧೭ ತಿಂಗಳಿನಿಂದ ಬಂಧನದಲ್ಲಿದ್ದು, ಇನ್ನೂ ವಿಚಾರಣೆ ಆರಂಭವಾಗಿಲ್ಲ. ಇದು ಅವರ ತ್ವರಿತ ವಿಚಾರಣೆಯ ಹಕ್ಕನ್ನು ಕಸಿದುಕೊಂಡಿದೆ ಎಂದಿದ್ದಾರೆ.
ಇಂದು ಸತ್ಯ ಗೆದ್ದಿದೆ, ದೆಹಲಿಯ ವಿದ್ಯಾರ್ಥಿಗಳು ಗೆದ್ದಿದ್ದಾರೆ.ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ ಕಾರಣ ಅವರನ್ನು ಜೈಲಿಗೆ ಹಾಕಲಾಯಿತು ಎಂದು ಅತಿಶಿ ಭಾವುಕರಾಗಿ ಹೇಳಿದ್ದಾರೆ.ಅದೇ ವೇಳೆ ಸತ್ಯಮೇವ ಜಯತೆ ಎಂದು ಅತಿಶ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.