Saturday, April 19, 2025
Google search engine

Homeಅಪರಾಧಕೋರ್ಟ್ ಆವರಣದಲ್ಲೇ ವಕೀಲನಿಂದ ಯುವತಿ ಮೇಲೆ ಅತ್ಯಾಚಾರ

ಕೋರ್ಟ್ ಆವರಣದಲ್ಲೇ ವಕೀಲನಿಂದ ಯುವತಿ ಮೇಲೆ ಅತ್ಯಾಚಾರ

ನವದೆಹಲಿ: ಕೆಲಸ ಕೊಡಿಸುವ ನೆಪದಲ್ಲಿ ಮಾತನಾಡಲು ಹೋದ ನನ್ನ ಮೇಲೆ ಕೋರ್ಟ್ ಆವರಣದಲ್ಲೇ ವಕೀಲರೊಬ್ಬರು ಅತ್ಯಾಚಾರ ಎಸಗಿರುವುದಾಗಿ ಯುವತಿಯೊಬ್ಬಳು ನೀಡಿದ ದೂರಿನ ಮೇಲೆ ಸಬ್ಜಿ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ನೀಡಿದ ದೂರಿನಲ್ಲಿ ಕೆಲಸ ಹುಡುಕುತ್ತಿದ್ದ ನನ್ನನ್ನು ಕೆಲಸ ಕೊಡಿಸುವುದಾಗಿ ಹೇಳಿ ಕೋರ್ಟ್ ಅವರದಲ್ಲಿರುವ ವಕೀಲರ ಕಚೇರಿಗೆ ಕಳೆದ ಜುಲೈ ತಿಂಗಳಿನಲ್ಲಿ ಕರೆಸಿದ್ದರು. ಈ ವೇಳೆ ನನ್ನ ವಿದ್ಯಾಭ್ಯಾಸದ ದಾಖಲೆಗಳನ್ನು ಪಡೆದುಕೊಂಡು ಎಂಟು ಹತ್ತು ದಿನಗಳ ಒಳಗೆ ಕೆಲಸ ಕೊಡಿಸುವ ಭರವಸೆ ನೀಡಿದ್ದರು ಆದರೆ ಹತ್ತು ದಿನ ಕಳೆದರೂ ಯಾವುದೇ ಮಾಹಿತಿ ನೀಡದ ವಕೀಲರಿಗೆ ಕರೆ ಮಾಡಿದಾಗ ಕೋರ್ಟ್ ಆವರಣದಲ್ಲಿರುವ ವಕೀಲರ ಚೇಂಬರ್‌ಗೆ ಬರುವಂತೆ ಹೇಳಿದ್ದಾರೆ. ಹಾಗಾಗಿ ಮಾತನಾಡಲು ಚೇಂಬರ್‌ಗೆ ಹೋದಾಗ ಕೆಲಸದ ವಿಚಾರ ಮಾತನಾಡುತ್ತಲೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿಕೊಂಡಿದ್ದಾಳೆ.

ಅತ್ಯಾಚಾರ ಎಸಗಿರುವ ಕುರಿತು ಯಾರಿಗಾದರೂ ತಿಳಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ ವಕೀಲ ಯುವತಿಯ ಕೈಗೆ ೧೫೦೦ ರೂಪಾಯಿ ನೀಡಿ ಅಲ್ಲಿಂದ ತೆರಳುವಂತೆ ಹೇಳಿದ್ದಾರೆ.

ಮನೆಗೆ ಬಂದ ಯುವತಿ ಮನೆಯವರಲ್ಲಿ ನಡೆದ ವಿಚಾರಗಳನ್ನು ತಿಳಿಸಿದ್ದಾಳೆ. ಮಗಳ ಹೇಳಿಕೆಯಿಂದ ಆತಂಕಗೊಂಡ ಪೋಷಕರು ಸಬ್ಜಿ ಮಂಡಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಯುವತಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular