Sunday, April 20, 2025
Google search engine

Homeರಾಜ್ಯಸುದ್ದಿಜಾಲಚಿಕ್ಕಕೊಪ್ಪಲು ಗ್ರಾಮದಲ್ಲಿ ಕಂಬಮ್ಮ ದೇವಾಲಯ ಉದ್ಘಾಟನೆ

ಚಿಕ್ಕಕೊಪ್ಪಲು ಗ್ರಾಮದಲ್ಲಿ ಕಂಬಮ್ಮ ದೇವಾಲಯ ಉದ್ಘಾಟನೆ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ‌ ಚಿಕ್ಕಕೊಪ್ಪಲು ಗ್ರಾಮದಲ್ಲಿ ನೂತನವಾಗಿ ಸುಮಾರು 40 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿರುವ ಶ್ರೀ ಆದಿಶಕ್ತಿ ಕಂಬಮ್ಮ ತಾಯಿ ದೇವರ ಪ್ರತಿಷ್ಟಾಪನೆ ಮತ್ತು ದೇವಾಲಯ ಉದ್ಘಾಟನೆ ಸಾವಿರಾರು ಮಂದಿಯ ಸಮ್ಮುಖದಲ್ಲಿ ಬಾರಿ ವಿಜೃಂಭಣೆಯಿಂದ ಶುಕ್ರವಾರ ನೆರವೇರಿತು.

ಸರ್ಕಾರ ಮತ್ತು ಜನಪ್ರತಿನಿಧಿಗಳ ಅನುಧಾನ ಮತ್ತು ಆರ್ಥಿಕ ಸಹಕಾರ ಇಲ್ಲದೇ ಗ್ರಾಮದ ಬೆಣ್ಣೆ ಸಿದ್ದೇಗೌಡರ ಕುಟುಂಬದ ವಂಶಸ್ಥರು ನಿರ್ಮಿಸಿರುವ ಶ್ರೀ ಆದಿಶಕ್ತಿ ಕಂಬಮ್ಮ ತಾಯಿ ದೇವರ ಪ್ರತಿಷ್ಡಾಪನೆ ಮತ್ತು ದೇವಾಲಯ ಉದ್ಘಾಟನೆಯ ಹಿನ್ನಲೆಯಲ್ಲಿ ಬುಧವಾರ ದಿಂದ ಶುಕ್ರವಾರ ತನಕ ವಿವಿಧ ಬಗೆಯ‌ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು.

ಬುಧವಾರ ಗ್ರಾಮದ ಕೂಟದ ದೇವರುಗಳಾದ ಕರಿಯಮ್ಮಹವಳಿಭೂತ, ,ಹುಚ್ಚಮ್ಮ ಲಕ್ಕಯ್ಯ ,ಭದ್ರಕಾಳಮ್ಮ ವೀರಭದ್ರೇಶ್ವರ ದೇವರ ಜೊತೆ ಕಂಬಮ್ಮ ತಾಯಿ ದೇವರನ್ನು ಚುಂಚನಕಟ್ಟೆಯ ಕಾವೇರಿ ನದಿಯಿಂದ 101 ಬಿಂದಿಗೆ ನೀರಿನ ಗಂಗಾ ಸ್ನಾನ ಮಾಡಿಸಿ ನಂತರ ಹೋಮ ಪೂರ್ಣಾಹುತಿ ಕಾರ್ಯಕ್ರಮ ಮಾಡಿ ದೇವರ ಗುಡ್ಡಪ್ಪಗಳ ಮೂಲಕ ಕಳಸ ಹೊತ್ತು ಮಕ್ಕಳ ಮೂಲಕ ಕಂಬಮ್ಮ ದೇವರನ್ನು ಬರಮಾಡಿ ಕೊಂಡು ನಂತರ ಮಂಗಳ ವಾದ್ಯದೊಂದಿಗೆ ದೊಡ್ಡಕೊಪ್ಪ- ಚಿಕ್ಕಕೊಪ್ಪಲು ಅವಳಿ ಗ್ರಾಮವನ್ನು ಪ್ರವೇಶಿಸಿ ನಂತರ ಚಿಕ್ಕಕೊಪ್ಪಲು ಗ್ರಾಮದ ಈ ದೇವಾಲಯಕ್ಕೆ ತರಲಾಯಿತು.

ಗುರುವಾರ ರಾತ್ರಿ 7.30 ನಂತರ ದೇವಾಯಲದ ಅವರಣದಲ್ಲಿ ಹೆಬ್ಬಾಳಿನ ಪುರೋಹಿತರಾದ ಸುರೇಶ್ ಕಶ್ಯಪ್ ನೇತೃತ್ವದಲ್ಲಿ ನೂರಾರು ಮಂದಿಯ ಸಮ್ಮುಖದಲ್ಲಿ 9 ಜೋಡಿ ದಂಪತಿಗಳ ಮೂಲಕ ಯಾಗ ಶಾಲಾ ಪ್ರವೇಶ,ಗಣಪತಿ ಪೂಜೆ,ಗಣಹೋಮ,ನವಗ್ರಹ ಹೋಮ, ವಾಸ್ತುಹೋಮ,ದುರ್ಗ ಹೋಮ,ಸರ್ವದೇವತಾ ಹೋಮ ಕಾರ್ಯಕ್ರಮ ರಾತ್ರಿ 10.30 ತನಕ ನಡೆದು ಆ ನಂತರ ಮಹಾ ಮಂಗಳಾರತಿ ಕಾರ್ಯಕ್ರಮ ಜರುಗಿದವು.

ಶುಕ್ರವಾರ ಬೆಳಿಗ್ಗೆ ಮುಂಜಾನೆ 4 ರಿಂದ ನೂತನ ದೇವಾಲಯದಲ್ಲಿ ಸುಪ್ರಭಾತ ಸೇವೆ ಆರಂಭಿಸಿ ಗೋವನ್ನು ದೇವಾಲಯಕ್ಕೆ‌ ಪ್ರವೇಶ ಮಾಡಿಸಿ ಕಳಸವನ್ನು ಸ್ಥಾಪನೆ ಮಾಡಿದ ಬಳಿಕ‌ ದೇವಸ್ಥಾನದ ಗರ್ಭಗುಡಿಗೆ ಕಂಬಮ್ಮ‌ದೇವರನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಬಾಳೆ ಗಿಡವನ್ನು ಕಡಿದು ದೇವರಿಗೆ ಅಡಗನಹಳ್ಳಿ ಗ್ರಾಮದ ಗುಡ್ಡದ ಗುರುಗಳಾದ ಚಂದ್ರಪಾಲ್ ಜೀವ ಕಳೆಯನ್ನು ತುಂಬಿದಾಗ‌ ನೆರದಿದ್ದರವರು ಚಪ್ಪಾಳೆ ತಟ್ಟಿ ದೇವರಿಗೆ ಜಯಕಾರ ಹಾಕಿ ಸಂಭ್ರಮಿಸಿದರು.

ಪ್ರತಿಷ್ಠಾಪನೆಯ ಬಳಿಕ ಕಂಬಮ್ಮ ದೇವರಿಗೆ ವಿವಿಧ ಮಂತ್ರಾಕ್ಷತೆಯ ಮೂಲಕ ಅಭಿಷೇಕ ಮಾಡಿದ ನಂತರ ದೇವರಿಗೆ ವಿವಿಧ ಹೂವುಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹಾಜರಿದ್ದ ಗ್ರಾಮಸ್ಥರಿಗೆ ತೀರ್ಥ ಪ್ರಸಾದ ವಿತರಣೆ ಮಾಡಿದಾಗ ನೆರದಿದ್ದ ಗ್ರಾಮಸ್ಥರು ಭಕ್ತಪರವಶವಾದರಲ್ಲದೇ ತಮ್ಮ ಇಷ್ಟಾರ್ಥ ನೇರವೇರಿಸುವಂತೆ ದೇವರರಲ್ಲಿ ಪ್ರಾರ್ಥಿಸಿದರು.

ದೇವರ ಪ್ರತಿಷ್ಠಾಪನೆ ನಂತರ ಮಧ್ಯಾನ 12ರ ನಂತರ ಸಾಮೂಹಿಕ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಚಿಕ್ಕಕೊಪ್ಪಲು ಗ್ರಾಮವಲ್ಲದೇ ದೊಡ್ಡಕೊಪ್ಪಲು, ಕಟ್ಟೆಕೊಪ್ಪಲು, ವಡ್ಡರಕೊಪ್ಪಲು,ಕುಪ್ಪೆ, ಮುದ್ದನ ಹಳ್ಳಿ ಸೇರಿದಂತೆ ಇತರೆ ಗ್ರಾಮಗಳಿಂದ ಸಾವಿರಾರು ಮಂದಿ ಗ್ರಾಮಸ್ಥರು ಭಾಗಿಯಾಗಿದ್ದರು.

“ಬಸವನ ಮೂಲಕ ಅರ್ಚಕರ ನೇಮಕ”
ಕಂಬಮ್ಮ ದೇವರ ಪ್ರತಿಷ್ಠಾಪನೆ ನಡೆದ ಹಿನ್ನಲೆಯಲ್ಲಿ ಈ ದೇವಾಲಯಕ್ಕೆ ನೂತನ ಅರ್ಚಕರ ಜೊತೆಗೆ ಈ ಬೆಣ್ಣೆ ಸಿದ್ದೇಗೌಡ ಕುಟುಂಬದ ನೂತನ‌ ಯಜಮಾನ ಮತ್ತು ಹೆಗ್ಗಡಿ, ಕೋಲಕಾರನನ್ನು ಮಳವಳ್ಳಿಯ‌ ಹೊನ್ನನಾಯಕಹಳ್ಳಿ ಸಿದ್ದಾಪ್ಪಾಜಿ ದೇವಸ್ಥಾನದ ಬಸವನನ್ನು ಕರೆಸಿ ಅದರ ಮೂಲಕ ಆಯ್ಕೆ ಮಾಡುವ ಕಾರ್ಯವನ್ನು‌ ಈ ತಿಂಗಳ ಅಂತ್ಯದ ಒಳಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಈ ಕುಂಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular