Saturday, April 19, 2025
Google search engine

Homeಸ್ಥಳೀಯಇಂದು ಮೈಸೂರು ಚಲೋ ಸಮಾರೋಪ

ಇಂದು ಮೈಸೂರು ಚಲೋ ಸಮಾರೋಪ

ಮೈಸೂರು: ಬಿಜೆಪಿ, ಜೆಡಿಎಸ್‌ನ ಮೈಸೂರು ಚಲೋ ಪಾದಯಾತ್ರೆಯು ಕ್ಲೈಮ್ಯಾಕ್ಸ್ ತಲುಪಿದ್ದು, ಮುಖ್ಯಮಂತ್ರಿ ತವರಿನಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷಗಳ ರಣಕಹಳೆಗೆ ವೇದಿಕೆ ಸಜ್ಜಾಗಿದೆ.

ನಿನ್ನೆ ಕಾಂಗ್ರೆಸ್ ಸರ್ಕಾರ ಶಕ್ತಿ ಪ್ರದರ್ಶನ ನಡೆಸಿದ ಮಹಾರಾಜ ಕಾಲೇಜು ಮೈದಾನದಲ್ಲಿ ಇಂದು ಶನಿವಾರ ಬಿಜೆಪಿ, ಜೆಡಿಎಸ್ ಪಾದಯಾತ್ರೆಯ ಸಮಾರೋಪ ಸಮಾವೇಶವೂ ನಡೆಯಿತು. ಮುಖ್ಯಮಂತ್ರಿ, ಸಚಿವರ ವಾಗ್ದಾಳಿಗೆ ಅಲ್ಲಿಯೇ ಉತ್ತರ ನೀಡಲು ವಿರೋಧ ಪಕ್ಷಗಳ ನಾಯಕರು ಸಜ್ಜಾಗಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ಪಡೆಯುವ ಮೂಲಕ ಹೋರಾಟ ಸಮಾಪ್ತಿಗೊಳಿಸುವ ಉತ್ಸಾಹದಲ್ಲಿದೆ. ಇದು ಮತ್ತೊಂದು ಸುತ್ತಿನ ಮಾತಿನ ಸಮರಕ್ಕೂ ಸಾಕ್ಷಿಯಾಗಲಿದೆ. ಆಗಸ್ಟ್ 3 ರಂದು ಬೆಂಗಳೂರಿನ ಕೆಂಗೇರಿ ಸಮೀಪ ಆರಂಭಗೊಂಡ ಪಾದಯಾತ್ರೆಯು ಏಳು ದಿನಗಳ ಕಾಲ. 140 ಕಿ.ಮೀ.ಗೂ ಹೆಚ್ಚು ಹೆಜ್ಜೆ ಹಾಕಿರುವ ನಾಯಕರು, ದಣಿವು ಮರೆತು ಸರ್ಕಾರವನ್ನು ಹಣಿಯುವ ತಂತ್ರ ರೂಪಿಸುತ್ತಿದ್ದಾರೆ.

ಆರಂಭದಲ್ಲಿ, ಪಾದಯಾತ್ರೆಯೂ ತಮಗೂ ಸಂಬಂಧವೇ ಇಲ್ಲ ಎಂದು ಮುನಿಸು ತೋರಿದ್ದ ಜೆಡಿಎಸ್ ನಾಯಕರು ನಂತರ, ಬಿಜೆಪಿ ಹೈಕಮಾಂಡ್‌ಗೆ ತಲೆಬಾಗಿ ಹೆಜ್ಜೆ ಹಾಕಿದ್ದಾರೆ. ಆದರೂ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಮುನಿಸು ಮುಂದುವರಿದಿದೆ. ಆಷಾಢದ ತಂಗಾಳಿಯು ಪಾದಯಾತ್ರಿಗರ ದಣಿಯನ್ನು ತಣಿಸಿದ್ದು, ಇದೀಗ ಶ್ರಾವಣದ ಹೊಸ ಗಾಳಿ ಜೊತೆಗೆ ರಾಜ್ಯದಲ್ಲಿ ಹೊಸ ಸರ್ಕಾರವೂ ಬರಲಿ ಎಂಬ ಬೇಡಿಕೆ ಮುಂದಿಟ್ಟು ಹೋರಾಟ ಸಮರೋಪಗೊಳ್ಳುತ್ತಿದೆ. ಹಿಂದಷ್ಟೇ ಲೋಕಸಭೆ ಚುನಾವಣೆ ಜನರಿಗೆ ನಡೆಯುತ್ತಿರುವ ತಿಂಗಳ ವಿಪಕ್ಷಗಳ ಈ ಯಾತ್ರೆಯು ಮತ್ತೆ ಚುನಾವಣೆಯನ್ನು ನೆನಪಿಸುತ್ತದೆ.

ಬೆಂಗಳೂರು, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳಲ್ಲಿ ಶಕ್ತಿ ಪ್ರದರ್ಶನ ತೋರಿರುವ ಪಾದಯಾತ್ರೆಯ ಜೊತೆಗೆ ಬರೀ ಸರ್ಕಾರದ ವಿರುದ್ಧ ವಾಗ್ದಾಳಿಯೇ ಸದ್ದು ಮಾಡಿದೆ. ಮುಡಾ ಹಗರಣದ ವಿಚಾರವೇ ಇಡೀ ಯಾತ್ರೆಯನ್ನು ಆವರಿಸಿದೆ. ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿಗೆ ವರ್ಚಸ್ಸು ವೃದ್ಧಿಗೆ ದಾರಿಯಾಗಿದೆ. ಹಳೇ ಮೈಸೂರು ಭಾಗದಲ್ಲಿ ಈ ಮೂಲಕ ಜೆಡಿಎಸ್ ತನ್ನ ಬೇರುಗಳನ್ನು ಗಟ್ಟಿಯಾಗಿಸಲು ಪ್ರಯತ್ನಿಸುತ್ತಿದೆ, ಬಿಜೆಪಿಯು ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿದೆ. ಶನಿವಾರದ ಸಮಾವೇಶದಲ್ಲಿಮೈತ್ರಿನಾಯಕರ ದಂಡೇ ಭಾಗವಹಿಸಲಿದೆ.

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ. ಮೈಸೂರಿನ ನೆರೆ,ಹೊರೆಯ ಜಿಲ್ಲೆಗಳ ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆ ತರಲಾಗುತ್ತಿದೆ. ಸಮಾವೇಶ ಪೂರ್ಣಗೊಳ್ಳುತ್ತಲೇ ಕಾಂಗ್ರೆಸ್ ನಾಯಕರ ಫ್ಲೆಕ್ಸ್ ತರಾಟೂರಿಯಲ್ಲಿ ಬಿಚ್ಚಲಾಯಿತು. ಅಲ್ಲಿ ಬಿಜೆಪಿ, ಜೆಡಿಎಸ್ ಫ್ಲೆಕ್ಸ್ ಹಾಗೂ ಬಾವುಟಗಳು ತಲೆ ಎತ್ತಿದವು.

ಕಾಂಗ್ರೆಸ್‌ನ ಬೃಹತ್ ವೇದಿಕೆಯನ್ನು ಮರುವಿನ್ಯಾಸಗೊಳಿಸುವ ಕಾರ್ಯವೂ ಭರದಿಂದ ಸಾಗಿತ್ತು. ಮಳೆಯಲ್ಲೂ ಹೆಜ್ಜೆಮೈಸೂರು ಚಲೋ’ ಪಾದಯಾತ್ರೆ ಶುಕ್ರವಾರ ಸಂಜೆ ನಗರದ ಹೊರವಲಯಕ್ಕೆ ಬಂದಿದ್ದು ನಗರ ಪ್ರವೇಶಕ್ಕೆ ಪೊಲೀಸರು ಕೆಲಹೊತ್ತು ಅನುಮತಿ ನೀಡಲಿಲ್ಲ. ಹೀಗಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆಗಳು ಬೆಂಗಳೂರು, ಮೈಸೂರು ರಸ್ತೆಯಲ್ಲೇ ಕುಳಿತರು. ಮೈಸೂರು ಪ್ರವೇಶ ನಗರಕ್ಕೆ ರಾತ್ರಿ ೭ರ ಬಳಿಕ ಅನುಮತಿ ನೀಡಿದ್ದರು.

ಆದರೆ ಸಂಜೆ 5ರ ವೇಳೆಗೆಲ್ಲ ಪಾದಯಾತ್ರೆ ನಗರದ ಹೊರವಲಯಕ್ಕೆ ಬಂದಿದ್ದು ಆಗಿದ್ದರೂ ಕಾಂಗ್ರೆಸ್ ಸಮಾವೇಶಕ್ಕೆ ಬಂದವರು ಹೊರ ಹೋಗುತ್ತಿದ್ದರಿಂದ ಅನುಮತಿ ನೀಡಲಿಲ್ಲ. ನಂತರ ಪಾದಯಾತ್ರೆ ಮುಂದುವರಿದಿದ್ದು ಮಬ್ಬುಗತ್ತಲಲ್ಲಿ ಮಳೆಯಲ್ಲಿ ಹೆಜ್ಜೆ ಹಾಕಿದ ಉತ್ಸಾಹಿಗಳು ರಾತ್ರಿ 8ರ ವೇಳೆಗೆ ನಗರದ ಜೆ.ಕೆ. ಮೈದಾನಕ್ಕೆ ಬಂದು ತಲುಪಿದರು. ಏಳನೇ ದಿನದ ಪಾದಯಾತ್ರೆಯು ಶುಕ್ರವಾರ ೨೦ ಕಿಲೋಮೀಟರ್‌ನಷ್ಟು ಕ್ರಮಿಸಿತು. ಆರಂಭದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪ್ರತ್ಯೇಕವಾಗಿ ಹೊರಟಿದ್ದು ನಂತರ ಒಂದಾದವು. ಮಹಿಳೆಯರು ಒನಕೆ ಹಿಡಿದು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ವಿಪಕ್ಷ ನಾಯಕ ಆರ್. ಅಶೋಕ್ ಮೈಸೂರು, ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಜಿ ಸಂಸದ ಪ್ರತಾಪ ಸಿಂಹ ಶಾಸಕರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ ಟಿ.ಎಸ್. ಶ್ರೀವತ್ಸ ಜಿ.ಡಿ. ಹರೀಶ್ ಗೌಡ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಬಿ.ಎಸ್. ಶ್ರೀರಾಮುಲು ಸಹಕರಿಸಿದರು ಜೊತೆಯಾಗಿ ನಡೆದರು.

RELATED ARTICLES
- Advertisment -
Google search engine

Most Popular