Saturday, April 19, 2025
Google search engine

Homeರಾಜ್ಯಸುದ್ದಿಜಾಲಹುತಾತ್ಮ ಯೋಧ ಮತ್ತು ಅನ್ನದಾತನ ನೆನಪು ಶ್ಲಾಘನೀಯ: ಪಿಎಸ್‌ಐ ಹರೀಶ್

ಹುತಾತ್ಮ ಯೋಧ ಮತ್ತು ಅನ್ನದಾತನ ನೆನಪು ಶ್ಲಾಘನೀಯ: ಪಿಎಸ್‌ಐ ಹರೀಶ್

ಚನ್ನಪಟ್ಟಣ: ದೇಶ ಕಾಯುವ ಯೋಧರು ಹಾಗೂ ಅನ್ನ ನೀರು ರೈತರನ್ನು ಹುತಾತ್ಮರಾದ ಬಳಿಕವೂ ಸ್ಮರಣೆ ಮಾಡುವುದು ಸ್ವಾಗತಾರ್ಹವಾಗಿದೆ ಎಂದು ನಿವೃತ್ತ ಸೇನಾನಿ ಹಾಗೂ ಪುರ ಪೊಲೀಸ್ ಠಾಣೆಯ ಪಿಎಸ್‌ಐ ಹರೀಶ್ ಅವರು ಶ್ಲಾಘನೆ ಮಾಡಿದರು.

ತಾಲೂಕಿನ ರೈತ ಮುಖಂಡರಾದ ಹೆಚ್. ಮೊಗೇನಹಳ್ಳಿ ಎಂ.ರಾಮು ಅವರ ೩ ನೇ ವರ್ಷದ ಪುಣ್ಯ ಸ್ಪರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ನಾವು ಇಂದು ಸಮಾಜದಲ್ಲಿ ನೆಮ್ಮದಿಯಿಂದ ಜೀವನ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಗಡಿಯಲ್ಲಿ ರಕ್ಷಣೆ ಕಾಯುತ್ತಾ ನಮ್ಮತ್ತ ಅಪಾಯ ಸುಳಿಯದಂತೆ ಹಗಲಿರುಳು ಸೇವೆ ಮಾಡುತ್ತಿರುವ ಯೋಧ ಹಾಗೂ ನಮಗೆ ಅನ್ನ ನೀಡುವ ಅನ್ನದಾತನ ಶ್ರಮದಿಂದ. ಆದರೆ ಇಂದು ರೈತರು ಶ್ರಮ ಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಪಡೆಯಲು ಹೋರಾಟ ಮಾಡಬೇಕಿದೆ, ಕೃಷಿಗೆ ಬೇಕಾದ ಸೌಲಭ್ಯ ಕೇಳಲು ಹೋರಾಟ ಮಾಡುವ ಪರಿಸ್ಥಿತಿ ಇದೆ. ಈ ಎಲ್ಲವನ್ನು ಪ್ರಶ್ನೆ ಮಾಡುವ ಗಟ್ಟಿ ಧ್ವನಿ ಎಂದರೆ ಅದು ರೈತರ ನಾಯಕರು ಮಾತ್ರ ಸಾವಿರಾರು ರೈತರ ಧ್ವನಿಯಾಗಿ ಸರ್ಕಾರ ಮತ್ತು ಅಧಿಕಾರಿಗಳನ್ನು ಪ್ರಶ್ನೆ ಮಾಡುವ ರೈತರ ನಾಯಕರ ಅವಶ್ಯಕತೆ ಇಂದಿಗೂ ಇದೆ. ಇಂತಹ ರೈತನಾಯಕರಾಗಿದ್ದ ಎಂ. ರಾಮು ಅವರು ನವಲಗುಂದ ರೈತರ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿ ವಾಪಸ್ ಬರುವಾಗ ಅಪಘಾತದಲ್ಲಿ ನಿಧನರಾಗಿದ್ದರು ಎಂದರೆ ರಾಮು ಅವರು ಸಹ ಹುತಾತ್ಮರಾಗಿದ್ದಾರೆ. ಇವರ ಸ್ಮರಣೆ ಮೂಲಕ ಮುಂದಿನ ಪೀಳಿಗೆಗೆ ಇವರ ಬಗ್ಗೆ ಪರಿಚರಿಸಿ ಹೋರಾಟದ ಗುಣಗಳನ್ನು ಕಲಿಸಲು ಪ್ರೇರೇಪಣೆಯಾಗಿದೆ ಎಂದರು.

ಕರ್ನಾಟಕ ರಾಜ್ಯ ನೇಗಿಲು ಹೊತ್ತ ರೈತರ ಸಂಘದ ವತಿಯಿಂದ. ರಾಜ್ಯಾಧ್ಯಕ್ಷರು ಬೇವೂರು ಕೃಷ್ಣೆಗೌಡ ಮಾತನಾಡಿ, ರೈತನಾಯಕರಾದ ಎಂ. ರಾಮು ಅವರು ಸದಾ ರೈತರ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದರು. ರೈತರಿಗೆ ಯಾವುದೇ ಸಮಸ್ಯೆ ಆದರೂ ಮೊದಲು ಧ್ವನಿ ಎತ್ತುವ ಮೂಲಕ ಹೋರಾಟದ ಕಿಚ್ಚು ನೀಡುತ್ತಿದ್ದರು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನೇರವಾಗಿ ಪ್ರಶ್ನೆ ಮಾಡುವ ಅವರ ಗುಣ ಕೆಲವರಲ್ಲಿ ವಿರೋಧಕ್ಕೆ ಕಾರಣವಾದರೂ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ರಾಮು ಅವರು ಎಂದೂ ಹಿಂದೆ ಸರಿದವರಲ್ಲಾ. ಬೈಕ್ ಅಪಘಾತದಲ್ಲಿ ಗಾಯಗೊಂಡು ಮನೆಯಲ್ಲಿದ್ದರೂ ಸಹ ರೈತ ಸಂಘದ ಹೋರಾಟದ ಬಗ್ಗೆ ಚಿಂತನೆ ಮಾಡು ಮನೆಯಿಂದಲೇ ಹೋರಾಟದ ರೂಪುರೇಷೆ ರಚಿಸಿ ಮಾರ್ಗದರ್ಶನ ನೀಡುತ್ತಿದ್ದರು. ಸದಾ ರೈತರ ಹಿತಕ್ಕೆ ಮಿಡಿಯುತ್ತಿದ್ದ ರಾಮು ಅವರು ನಮ್ಮಿಂದ ಅಗಲಿದ್ದರೂ ಅವರ ಹಾಕಿಕೊಟ್ಟ ಹೋರಾಟದ ಮಾರ್ಗದರ್ಶನ ಸದಾ ನಮ್ಮನ್ನು ಕಾಪಾಡುತ್ತದೆ ಎಂದರು.

ಸಂದರ್ಭದಲಿ ಚನ್ನಪಟ್ಟಣ ತಾಲೂಕು ಅಧ್ಯಕ್ಷರು ರವಿ ರವರು ಚನ್ನಪಟ್ಟಣ ತಾಲೂಕು ಆಟೋ ಘಟಕದ ಅಧ್ಯಕ್ಷರು ಲೋಕೇಶ್ ರವರು ಚನ್ನಪಟ್ಟಣ ತಾಲೂಕು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ರವರು ರಾಮನಗರ ಜಿಲ್ಲಾ ಉಪಾಧ್ಯಕ್ಷರು ಶಿವರಾಮು ರವರು. ಮೈನಾಯಕನಹಳ್ಳಿ ಗ್ರಾಮ ಶಾಖೆಯ ವಸಂತ್ ರವರು ಮಾಗಡಿ ತಾಲೂಕು ಗೌರವಾಧ್ಯಕ್ಷರು ಪರಮೇಶ್ ರವರು ಚನ್ನಪಟ್ಟಣ ನಗರ ಉಪಾಧ್ಯಕ್ಷರು ಆನಂದ್ ರವರು ಹಾಗೂ ರೈತ ಸಂಘಟನೆಯ ಎಲ್ಲಾ ಪದಾಧಿಕಾರಿಗಳ ಸಹಕಾರದೊಂದಿಗೆ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳ ಸಾಕಾರದೊಂದಿಗೆರಾಜ್ಯ ಮಹಿಳಾ ಅಧ್ಯಕ್ಷರು ಸುಮಲತಾ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.

RELATED ARTICLES
- Advertisment -
Google search engine

Most Popular