ಮೈಸೂರು : ಸ್ವಾವಲಂಬಿ ಜೀವನಕ್ಕೆ ಉದ್ಯೋಗ ಅವಶ್ಯಕತೆಯಾಗಿದೆ ಎಂದು ಲಯನ್ಸ್ ಅಂತಾರಾಷ್ಟ್ರೀಯ ಜಿಲ್ಲಾ ಗವರ್ನರ್ ಎನ್.ಸುಬ್ರಹ್ಮಣ್ಯ ಅಭಿಪ್ರಾಯ ಪಟ್ಟರು.
ಇಂದು ಮೈಸೂರು ನಗರದ ಜೆ.ಎಸ್.ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಆವರಣದಲ್ಲಿ ಬಾರ್ಕ್ಲೇನ್ ಸಹಕಾರದೊಂದಿಗೆ ಪರಮಪೂಜ್ಯ ಜಗದ್ಗುರು ಡಾ.ಶ್ರೀ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ೧೦೯ನೇ ಜಯಂತಿ ಮಹೋತ್ಸವ ಅಂಗವಾಗಿ ಸಮರ್ಥನಂ ಅಂಗವಿಕಲರ ಸಂಸ್ಥೆಯ ಮತ್ತು ಜೆ ಎಸ್ ಎಸ್ ವಿಶೇಷಚೇತನರ ಪಾಲಿಟೆಕ್ನಿಕ್, ಮೈಸೂರು ಸಂಯುಕ್ತಾಶ್ರಯದಲ್ಲಿ ಯುವವಿಶೇಷಚೇತನರಿಗೆ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಉದ್ಯೋಗ ಗಿಟ್ಟಿಸಿಕೊಳ್ಳಲು ಅರ್ಹತೆ ಜೊತೆಗೆ ಆ ಕೆಲಸ ಮಾಡುವ ಆತ್ಮವಿಶ್ವಾಸ ಹೊಂದಿರಬೇಕು ಹಾಗೂ ನಿಮ್ಮ ಕಾಲು ಮೇಲೆ ನಿಂತುಕೊಳ್ಳುವುದಕ್ಕೆ ಇಂತಹ ಉದ್ಯೋಗ ಮೇಳ ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಮರ್ಥನಂ ಸಂಸ್ಥೆಯ ಅಖಿಲ ಭಾರತ ಪ್ಲೇಸ್ಮೆಂಟ್ ಸೆಲ್ ಮುಖ್ಯಸ್ಥ ಕೆ.ಸತೀಶ್ ಮಾತನಾಡಿ, ಬದಲಾಗಿರುವ ಈಗಿನ ಸಾಮಾಜಿಕ ಸನ್ನಿವೇಶದಲ್ಲಿ ಕೆಲಸ ಮಾಡುವ ಮನಸ್ಸಿದ್ದರೆ ಅನೇಕ ಅವಕಾಶಗಳು ದೊರಕುತ್ತವೆ. ಅಲ್ಲದೆ ಉದ್ಯೋಗ ಮೇಳದಲ್ಲಿ ಭಾಗವಹಿಸುವುದರಿಂದ ಅಸಾಧಾರಣ ಪ್ರತಿಭೆಯನ್ನು ಸಕ್ರಿಯವಾಗಿ ಹುಡುಕುತ್ತಿರುವ ಪ್ರಮುಖ ಕಂಪನಿಗಳೊಂದಿಗೆ ತೊಡಗಿಸಿಕೊಳ್ಳಲು ಅನನ್ಯ ಅವಕಾಶವನ್ನು ನೀಡುತ್ತದೆ ಎಂದರು.
ಮೈಸೂರು ಕಿವುಡ ಸಂಘದ ಅಧ್ಯಕ್ಷರಾದ ಎನ್.ಮೂರ್ತಿ ಮಾತನಾಡಿ, ಸಮರ್ಥನಂ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಎಲ್ಲಾ ಅಬ್ಯಾರ್ಥಿಗಳಿಗೆ ಶುಬಾಷಯಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಬಿ. ಇಳಂಗೋವನ್, ವಿಶೇಷಚೇತನವು ಶಾಪವಲ್ಲ ವರವಾಗಿದ್ದು, ಲಭ್ಯವಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಜೀವನ ನಿರ್ವಹಣೆ ಮಾಡಬೇಕೆಂದು ಸಲಹೆ ನೀಡಿದರು.
ಸದರಿ ಕಾರ್ಯಕ್ರಮದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಎಲ್ ಆರ್ ಸಿ ವಿಭಾಗದ ಮುಖ್ಯಸ್ಥ ಸುಭಾಶ್ ಚಂದ್ರ, ಜೆ ಎಸ್ ಎಸ್ ಜೆ.ಎಸ್.ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಕೆ.ಕುಶಲ್, ಸಮರ್ಥನ ಮೈಸೂರು ವಿಭಾಗೀಯ ಮುಖ್ಯಸ್ಥ ಶಿವರಾಜು, ಸತೀಸ ನಾಯರ್, ವೀರಭದ್ರಪಾಟೇಲ್, ಸ್ವರ್ಶ ಮತ್ತಿತರರು ಭಾಗವಹಿಸಿದರು
ಸದರಿ ಉದ್ಯೋಗ ಮೇಳಕ್ಕೆ ೩೮೩ ವಿಶೇಷಚೇತನ ಅಭ್ಯಾರ್ಥಿಗಳು ಭಾಗವಹಿಸಿದ್ದು, ೧೧೪ ಅಭ್ಯಾರ್ಥಿಗಳು ಸ್ಥಳದಲ್ಲೆ ಆಯ್ಕೆಯಾಗಿರುತ್ತಾರೆ. ೮೨ ಅಬ್ಯಾರ್ಥಿಗಳು ಮುಂದಿನ ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ.