Saturday, April 19, 2025
Google search engine

Homeರಾಜ್ಯವಯನಾಡ್ ಭೂಕುಸಿತ: ಸಹಾಯಹಸ್ತ ನೀಡಲು ಉದ್ಯಮಿಗಳಿಗೆ ಸಚಿವ ಎಂ.ಬಿ ಪಾಟೀಲ್ ಮನವಿ

ವಯನಾಡ್ ಭೂಕುಸಿತ: ಸಹಾಯಹಸ್ತ ನೀಡಲು ಉದ್ಯಮಿಗಳಿಗೆ ಸಚಿವ ಎಂ.ಬಿ ಪಾಟೀಲ್ ಮನವಿ

ಬೆಂಗಳೂರು: ಕಂಡುಕೇಳರಿಯದ ಭೂಕುಸಿತದಿಂದ ನಲುಗಿರುವ ಕೇರಳದ ವಯನಾಡ್ ಜನತೆಯ ನೆರವಿಗೆ ರಾಜ್ಯದ ಕೈಗಾರಿಕೋದ್ಯಮಿಗಳು ಧಾವಿಸಿ, ಸಹಾಯಹಸ್ತ ಚಾಚಬೇಕು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮನವಿ ಮಾಡಿದ್ದಾರೆ.

ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಈ ಸಂಬಂಧ ಯಾವುದೇ ಮಾಹಿತಿ/ಮಾರ್ಗದರ್ಶನ ಬೇಕಾದಲ್ಲಿ ಕೈಗಾರಿಕಾ ಇಲಾಖೆಯ ಆಯುಕ್ತೆ ಗುಂಜನ್ ಕೃಷ್ಣ ಅವರನ್ನು ದೂರವಾಣಿ ಸಂಖ್ಯೆ ೦೮೦-೨೨೩೮೬೭೯೬ ಅಥವಾ ಮಿಂಚಂಚೆ fficeofdicommissioner@gmail.com ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ವಯನಾಡ್ ದುರಂತದಲ್ಲಿ ೪೧೨ ಮಂದಿ ಜೀವ ಕಳೆದುಕೊಂಡಿದ್ದು, ಇನ್ನೂ ೧೩೮ ಜನ ಕಣ್ಮರೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಉದ್ಯಮಲೋಕವು ಮಾನವೀಯತೆ ಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಉದ್ಯಮಿಗಳು ಸಂತ್ರಸ್ತರ ಪುನರ್ವಸತಿ, ಅಗತ್ಯ ವಸ್ತುಗಳ ಪೂರೈಕೆ, ಮನೆಗಳ ಪುನರ್ನಿರ್ಮಾಣ, ಮೂಲಸೌಕರ್ಯ, ಜೀವನೋಪಾಯಕ್ಕೆ ನೆರವು, ವೈದ್ಯಕೀಯ ನೆರವು ಹೀಗೆ ಯಾವ ರೂಪದಲ್ಲಾದರೂ ಸಹಾಯ ಮಾಡಬಹುದು ಎಂದು ಸಚಿವರು ತಿಳಿಸಿದ್ದಾರೆ. ನೆರೆಯ ರಾಜ್ಯವು ಈಗ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ತತ್ತರಿಸಿದೆ. ಆ ರಾಜ್ಯಕ್ಕೆ ನೆರವು ನೀಡಲು ಕರ್ನಾಟಕ ಸರಕಾರ ಬದ್ಧವಾಗಿದೆ ಎಂದು ಅವರು ವಿವರಿಸಿದ್ದಾರೆ.

RELATED ARTICLES
- Advertisment -
Google search engine

Most Popular