ರಾಯಚೂರು: ಕರ್ನಾಟಕ ಮುನ್ಸಿಪಲ್ ಕಾಯ್ದೆ ೧೯೬೪ರ ಪ್ರಕರಣ ೨೫೬ರ ಪ್ರಕಾರ ಯಾವುದೇ ವ್ಯಕ್ತಿಯು ಮುನ್ಸಿಪಲ್ ಕಮಿಷನರ್ ಅಥವಾ ಚೀಪ್ ಆಫೀಸರನು ಮಂಜೂರು ಮಾಡಿದ ಲೈಸೆನ್ಸ್ ಇಲ್ಲದೇ ಅಥವಾ ಅದರ ನಿಬಂಧನೆಗಳಿಗೆ ಅನುಗುಣವಾಗಿ ಯಾವುದೇ ವ್ಯಾಪಾರವನ್ನು ಮಾಡತಕ್ಕದ್ದಲ್ಲ. ಒಂದು ವೇಳೆ ಮುನ್ಸಿಪಲ್ ಕೌನ್ಸಿಲ್‌ನ ಪರವಾನಿಗೆ ಇಲ್ಲದೇ ವ್ಯಾಪಾರ ಮಾಡಿದ್ದಲ್ಲಿ ಅಂತವರ ವಿರುದ್ದ ದಂಡ ವಿಧಿಸಿ, ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕರ್ನಾಟಕ ಮುನ್ಸಿಪಲ್ ಕಾಯ್ದೆ ಅವಕಾಶ ಕಲ್ಪಿಸಿದೆ ಎಂದು ರಾಯಚೂರು ನಗರಸಭೆಯ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ ಅವರು ತಿಳಿಸಿದ್ದಾರೆ.
ರಾಯಚೂರು ನಗರದ ಎಲ್ಲಾ ವಹಿವಾಟು ಉದ್ಯಮಿಗಳು ತಾವು ಮಾಡುತ್ತಿರುವ ವ್ಯಾಪಾರದ ಅಂಗಡಿಗಳ ಕಡ್ಡಾಯವಾಗಿ ಲೈಸೆನ್ಸು ಪಡೆಯಬೇಕು. ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ ೨೫೭ನೇ ಪ್ರಕರಣದಡಿ ತಮ್ಮ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ನಗರಸಭೆಯಿಂದ ಉದ್ಯಮಿ ಲೈಸೆನ್ಸ್ ಪಡೆಯದೇ ವ್ಯಾಪಾರ ನಿರ್ವಹಿಸುವುದು ಅಕ್ಷಮ್ಯ ಅಪರಾಧವಾಗಿದ್ದು, ಉದ್ಯಮಿದಾರರು ಉದ್ಯಮಿ ಪ್ರಾರಂಭಿಸಿದ ದಿನಾಂಕದಿಂದ ಚಾಲ್ತಿ ಹಣಕಾಸು ವರ್ಷದವರೆಗೆ ಕಡ್ಡಾಯವಾಗಿ ಉದ್ಯಮೆ ಪರವಾನಿಗೆಯನ್ನು ಪಡೆಯತಕ್ಕದ್ದು ಉದ್ಯಮೆ ಪರವಾನಿಗೆಯನ್ನು ಪಡೆಯಲು ನಗರಸಭೆಯಲ್ಲಿ ವಿಶೇಷ ಕೌಂಟರನ್ನು ತೆರೆಯಲಾಗಿದ್ದು, ಎಲ್ಲಾ ವ್ಯಾಪಾರ ವಹಿವಾಟುಗಾರರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.
ಒಂದು ವೇಳೆ ೧೫ ದಿನಗಳ ಒಳಗಾಗಿ ಉದ್ದಿಮೆ ಪರವಾನಿಗೆ ಪಡೆಯದೇ ವ್ಯಾಪಾರ ವಹಿವಾಟು ಮಾಡಿದ್ದು, ಕಂಡುಬಂದಲ್ಲಿ ತಮ್ಮ ವಿರುದ್ಧ ಕಾನೂನು ಕ್ರಮವಹಿಸಲಾಗುವುದಲ್ಲದೆ ತಮ್ಮ ವ್ಯಾಪಾರ ವಹಿವಾಟನ್ನು ಕರ್ನಾಟಕ ಮುನ್ಸಿಪಲ್ ಕಾಯ್ದೆ-೨೫೭ರ ಪ್ರಕಾರ ಬೀಗ ಹಾಕಿ ಸ್ಥಗಿತ ಮಾಡಲಾಗುವುದು. ರಾಯಚೂರು ನಗರದ ವಹಿವಾಟು ಮಿತ್ರರು ಕಡ್ಡಾಯವಾಗಿ ನಗರಸಭೆಗೆ ಬಂದು ವ್ಯಾಪಾರ ಪರವಾನಿಗೆಯನ್ನು ಪಡೆಯಬೇಕು.
ತೆರಿಗೆ ಪಾವತಿಸಿ ಇಲ್ಲದಿದ್ದಲ್ಲಿ ಅಂಗಡಿಗಳಿಗೆ ಬೀಗ ಜಡಿಯಲಾಗುವುದು: ರಾಯಚೂರು ನಗರದ ಎಲ್ಲಾ ಸಾರ್ವಜನಿಕರು ಅಥವಾ ಉದ್ಯಮಿದಾರರು ತಮ್ಮ ಆಸ್ತಿಗಳಿಗೆ ಕಡ್ಡಾಯವಾಗಿ ತೆರಿಗೆ ಪಾವತಿಸಿ ನೀರಿನ ಕರ, ಜಾಹಿರಾತು ಕರವನ್ನು ಪಾವತಿಸಬೇಕು. ಒಂದು ವೇಳೆ ಯಾವುದೇ ಉದ್ಯಮಿದಾರರು ಸಾರ್ವಜನಿಕರು ಅಥವಾ ಉದ್ಯಮೆದಾರರು ತೆರಿಗೆ ಪಾವತಿಸದಿದ್ದಲ್ಲಿ ಅಂಥವರ ವಹಿವಾಟುಗಳನ್ನು ನಿರ್ಬಂಧಿಸಿ, ಅಂಗಡಿಗಳಿಗೆ ಬೀಗ ಹಾಕಲಾಗುವುದು. ತೆರಿಗೆಯನ್ನು ಪಾವತಿಸಿ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸಹಕರಿಸಬೇಕು. ತೆರಿಗೆ ಪಾವತಿಸದೇ ಇದ್ದಲ್ಲಿ ಅಂತವರನ್ನು ಸುಸ್ತಿದಾರರು ಎಂದು ಪರಿಗಣಿಸಿ ಅಂತವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು.
ಏಕ ಬಳಕೆ ಪ್ಲಾಸ್ಟಿಕ್ ಹಾಗೂ ಪಿಓಪಿ ಗಣಪತಿ ಮೂರ್ತಿಗಳ ನಿಷೇಧ:
ನಗರದ ಎಲ್ಲಾ ಉದ್ಯಮೆದಾರರು ರಾಯಚೂರು ನಗರದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಪಿ.ಓ.ಪಿಗಳಿಂದ ಹಾಗೂ ಆಯಿಲ್ ಪೇಂಟಿಂಗ್‌ಳಿಂದ ತಯಾರಿಸಿದ ಗಣಪತಿ ಮೂರ್ತಿಗಳ ಉತ್ಪಾದನೆ, ಸಾಗಾಟ, ಮಾರಾಟ ಹಾಗೂ ಪ್ರಚಾರ ಮಾಡುವುದನ್ನು ನಿಷೇಧಿಸಿದೆ. ಒಂದು ವೇಳೆ ಯಾವುದೇ ಉದ್ಯಮೆದಾರರು ಏಕಬಳಕೆ ಪ್ಲಾಸ್ಟಿಕನ್ನು ಉಪಯೋಗ ಮಾಡುತ್ತಿರುವುದು ಕಂಡುಬಂದಲ್ಲಿ ಅಂತವರ ವಿರುದ್ಧ ಕಾನೂನು ಕ್ರಮ ವಹಿಸುವುದಲ್ಲದೇ ೨೫,೦೦೦/- ದಿಂದ ೨,೫೦,೦೦೦/-ರೂ.ಗಳ ವರೆಗೆ ದಂಡ ವಿಧಿಸಲಾಗುವುದು.