ಮಡಿಕೇರಿ : ಎಚ್.ಐ.ವಿ/ಏಡ್ಸ್ ಹಾಗೂ ಲೈಂಗಿಕ ಸಂಪರ್ಕದ ಸೋಂಕಿನ ಕುರಿತು ಜಾಗೃತಿ ಮತ್ತು ತಡೆಗಟ್ಟುವ ಸಂಬಂಧ ರಾಷ್ಟ್ರದಾದ್ಯಂತ “Intensified IEC Campaign” ನ್ನು ಹಮ್ಮಿಕೊಂಡಿದೆ. ಈ ಆಂದೋಲನವನ್ನು ಆಗಸ್ಟ್ -12 ರಂದು ಅಂತರಾಷ್ಟೀಯ ಯುವ ದಿನಾಚರಣೆಯ ಸಂದರ್ಭದಲ್ಲಿ ಉದ್ಘಾಟನೆ ಮಾಡಲಾಯಿತು.
ಕೊಡಗು ಜಿಲ್ಲೆಯಲ್ಲಿ ಈ ದಿನ “Intensified IEC Campaign” ನ್ನು ಕರ್ನಾಟಕ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಡಗು ಜಿಲ್ಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಕೊಡಗು ಜಿಲ್ಲೆ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಭೋದಕ ಆಸ್ಪತ್ರೆ ಮಡಿಕೇರಿ ಇಲ್ಲಿ “ಅಂತರಾಷ್ಟೀಯ ಯುವ ದಿನಾಚರಣೆ-2024 ಕಾರ್ಯಕ್ರಮ ನಡೆಯಿತು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈಧ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್, ಜಿಲ್ಲಾ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ, ಶುಶ್ರೂಷಕ ಅಧಿಕಾರಿ ವೀಣಾ, ಆಡಳಿತಾಧಿಕಾರಿ ರೋೀಹಿಣಿ, ಬಿ.ಎಸ್.ಸಿ. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಮಂಜುಳಾ ಇತರರು ಇದ್ದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈಧ್ಯಕೀಯ ಅಧೀಕ್ಷಕರಾದ ಡಾ.ಸೋಮಶೇಖರ್ ಅವರು ಎಚ್.ಐ.ವಿ/ ಏಡ್ಸ್ ತಡೆಗಟ್ಟುವಲ್ಲಿ ಯುವಜನತೆಯ ಪಾತ್ರ ಅತೀ ಮುಖ್ಯ. ಆದ್ದರಿಂದ ತಮ್ಮನ್ನು ತಾವು ಎಚ್.ಐ.ವಿ ಬರದಂತೆ ತಡೆಗಟ್ಟಬೇಕು. ಮತ್ತು ಎಚ್.ಐ.ವಿ ಕುರಿತು ಅರಿವು ಮೂಡಿಸಬೇಕು ಎಂದರು. ಜಿಲ್ಲಾ ಆಸ್ಪತ್ರೆಯ ಐಸಿಟಿಸಿ ಕೇಂದ್ರದ ವೈದ್ಯಾಧಿಕಾರಿ ಡಾ.ಹರ್ಷ ಅವರು ಎಚ್.ಐ.ವಿ/ಏಡ್ಸ್ ಆಪ್ತ ಸಮಾಲೋಚನೆಯ ಮಹತ್ವ ಹಾಗೂ ಸೇವಾ ಸೌಲಭ್ಯಗಳಾದ ಐಸಿಟಿಸಿ, ಎ.ಆರ್.ಟಿ ಕೇಂದ್ರಗಳ ಕುರಿತು ಮಾಹಿತಿ ನೀಡಿದರು.

ಯುವಜನತೆ ಮತ್ತು ಎಚ್‍ಐವಿ ಹಾಗೂ “Intensified IEC Campaign” ಆಂದೋಲನದ ಕುರಿತು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ.ಆನಂದ್ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಂತರಾಷ್ಟೀಯ ಯುವ ದಿನಾಚರಣೆ-2024 ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ ಅಂತರ್ಜಾಲ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಪ್ರಥಮ ಬಹುಮಾನ : ದರ್ಶನ್ ಅಯ್ಯಪ್ಪ , ಕಾವೇರಿ ಪಾಲಿಟೆಕ್ನಿಕ್ ಗೋಣಿಕೊಪ್ಪ, ದ್ವಿತೀಯ ಬಹುಮಾನ : ದಿಲನ್ ಕಾವೇರಿ ಪಾಲಿಟೆಕ್ನಿಕ್ ಗೋಣಿಕೊಪ್ಪ, ತೃತೀಯ ಬಹುಮಾನ : ದಿಗಂತ್, ಸರಕಾರಿ ಪಾಲಿಟೆಕ್ನಿಕ್ ಕುಶಾಲನಗರ
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿ.ಎಸ್.ಸಿ. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ ಪ್ರಾರ್ಥಿಸಿದರು. ವಿದ್ಯಾರ್ಥಿ ಚಿದಾನಂದ್ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿ ನಿಧಿ ನಿರೂಪಿಸಿದರು. ಬಿ.ಎಸ್.ನರ್ಸಿಂಗ್ ಕಾಲೇಜು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವಿದ್ಯಾರ್ಥಿ ಹರ್ಷಿತ್ ಅವರು ವಂದಿಸಿದರು.