ನವದೆಹಲಿ: ಅದಾನಿ ಸಮೂಹದ ಕುರಿತು ಅಮೆರಿಕದ ಹಿಂಡನ್ ಬರ್ಗ್ ರೀಸರ್ಚ್ ನ ಇತ್ತೀಚಿನ ವರದಿ ಕುರಿತು ಹೇಳಿಕೆ ನೀಡಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಅವರನ್ನು ಅತ್ಯಂತ ಅಪಾಯಕಾರಿ ವ್ಯಕ್ತಿ ಎಂದು ಬಣ್ಣಿಸಿದ್ದು, ರಾಷ್ಟ್ರ ಮತ್ತು ಅದರ ಆರ್ಥಿಕತೆಯನ್ನು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಹಿಂಡನ್ಬರ್ಗ್ನ ಹೊಸ ಸಂಶೋಧನಾ ವರದಿ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ ರಾಹುಲ್ ಗಾಂಧಿಯತ್ತ ಬೊಟ್ಟು ಮಾಡಿರುವ ಕಂಗನಾ, ರಾಹುಲ್ ಗಾಂಧಿ ಅತ್ಯಂತ ಅಪಾಯಕಾರಿ ವ್ಯಕ್ತಿ. ಕಹಿ, ವಿಷಕಾರಿ ಮತ್ತು ವಿನಾಶಕಾರಿ ವ್ಯಕ್ತಿಯಾಗಿದ್ದಾರೆ. ತಾನು ಪ್ರಧಾನಿಯಾಗಲು ಸಾಧ್ಯವಾಗದಿದ್ದರೆ ಈ ದೇಶವನ್ನೇ ನಾಶಪಡಿಸುವುದು ರಾಹುಲ್ ಗಾಂಧಿ ಅಜೆಂಡಾ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ನಿಮ್ಮ ಜೀವನದುದ್ದಕ್ಕೂ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸಿದ್ಧರಾಗಿರಿ ಮತ್ತು ನೀವು ಅನುಭವಿಸುವ ರೀತಿಯಲ್ಲೇ ಈ ರಾಷ್ಟ್ರದ ಜನರ ವೈಭವ, ಬೆಳವಣಿಗೆ ಮತ್ತು ರಾಷ್ಟ್ರೀಯತೆಯನ್ನು ನೋಡಲು ಸಿದ್ಧರಾಗಿ. ಜನರು ನಿಮ್ಮನ್ನು ಎಂದಿಗೂ ತಮ್ಮ ನಾಯಕನನ್ನಾಗಿ ಮಾಡುವುದಿಲ್ಲ. ನೀವು ನಾಚಿಕೆಗೇಡಿನ ಮನುಷ್ಯ ಎಂದು ಕಿಡಿಕಾರಿದ್ದಾರೆ.