ಬೆಂಗಳೂರು: ಅದ್ಧೂರಿ ಮೈಸೂರು ದಸರಾ ಆಚರಣೆಗೆ ರಾಜ್ಯ ಸರ್ಕಾರವು ನಿರ್ಧಾರ ಕೈಗೊಂಡಿದೆ. ಅಲ್ಲದೇ ಅಕ್ಟೋಬರ್.೧೨ರಂದು ದಸರಾ ಜಂಬೂ ಸವಾರಿ ನಡೆಸೋದಕ್ಕೂ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಉನ್ನತ ಮಟ್ಟದ ಸಮಿತಿಯ ಸಭೆಯ ನಂತ್ರ ಮಾತನಾಡಿದಂತ ಅವರು, ರಾಜ್ಯದಲ್ಲಿ ಉತ್ತಮ ಮಳೆ, ಸಮೃದ್ಧಿಯ ಹಿನ್ನಲೆಯಲ್ಲಿ ಅದ್ಧೂರಿ ದಸರಾ ಆಚರಣೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದರು.
ಅಕ್ಟೋಬರ್ ೩ ರಿಂದ ೧೨ ರವರೆಗೆ ದಸರಾ ನಡೆಯಲಿದೆ. ಅಕ್ಟೋಬರ್ ೩ ರ ಬೆಳಿಗ್ಗೆ ೯ ಗಂಟೆ ೧೦ ನಿಮಿಷಕ್ಕೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಮತ್ತು ದಸರಾ ಉದ್ಘಾಟನೆ ಮಾಡಲಾಗುತ್ತದೆ. ಅಕ್ಟೋಬರ್ ೧೨ ರ ಮಧ್ಯಾಹ್ನ ೧೨ ಗಂಟೆ ೧೦ ನಿಮಿಷಕ್ಕೆ ಜಂಬೂ ಸವಾರಿ ಆರಂಭಗೊಳ್ಳಲಿದೆ ಎಂದರು.
ಕಳೆದ ವರ್ಷ ದಸರೆಗೆ ೩೦ ಕೋಟಿ ಖರ್ಚಾಗಿತ್ತು.ಈ ಸಲ ಇನ್ನಷ್ಟು ಹೆಚ್ಚು ಹಣ ಒದಗಿಸುವ ಇಂಗಿತ ವ್ಯಕ್ತ ಪಡಿಸಲಾಗಿತ್ತು ಎಂದರು.
ಈ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.