Saturday, April 19, 2025
Google search engine

Homeಅಪರಾಧಮಂಡ್ಯ:ಅಡ್ಡಾದಿಡ್ಡಿ ಕಾರು ಚಾಲನೆ; ತಪ್ಪಿದ ಭಾರೀ ಅನಾಹುತ

ಮಂಡ್ಯ:ಅಡ್ಡಾದಿಡ್ಡಿ ಕಾರು ಚಾಲನೆ; ತಪ್ಪಿದ ಭಾರೀ ಅನಾಹುತ

ಮಂಡ್ಯ: ಮಂಡ್ಯ ನಗರದಲ್ಲಿ ಹಾಡುಹಗಲೇ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿ ಕೆಲಕಾಲ ಭಯದ ವಾತಾವರಣ ಸೃಷ್ಟಿ ಮಾಡಿರುವಂತಹ ಘಟನೆ ನೂರಡಿ ರಸ್ತೆಯಲ್ಲಿ ನಡೆದಿದೆ. ಬೈಕ್, ಕಾರಿಗೆ ಡಿಕ್ಕಿಯೊಡೆದು ಫುಟ್ ಪಾತ್ ನಲ್ಲಿ ನಿಂತ ಇನ್ನೋವಾ ಕಾರು . KA 55 N 0856 ನಂಬರಿನ ಇನ್ನೋವಾ ಕ್ರಿಸ್ಟಾ ಕಾರು. ಅಸ್ವಸ್ಥ ಅನಾರೋಗ್ಯ ಪೀಡಿತ ಚಾಲಕನಿಂದ ಅಪಘಾತ ಸಂಭವಿಸಿದೆ.

ಕೋರ್ಟ್ ಕೇಸ್ ಹಿನ್ನೆಲೆ ಮಂಡ್ಯಕ್ಕೆ ಆಗಮಿಸಿದ್ದ ಮೈಸೂರು ಮೂಲದ ವ್ಯಕ್ತಿ. ಫುಟ್ ಪಾತ್ ಬಳಿಯ ಸಿಮೆಂಟ್ ಗೋಡೆಗೆ ಡಿಕ್ಕಿಯೊಡೆದ ಪರಿಣಾಮ ಭಾರೀ ಅನಾಹುತ ತಪ್ಪಿದೆ . ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ , ಪರಿಶೀಲನೆ ನಡೆಸಿದರು. ಕಾರಿನಲ್ಲಿದ್ದ ಅಸ್ವಸ್ಥ ವ್ಯಕ್ತಿಯನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮಂಡ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



RELATED ARTICLES
- Advertisment -
Google search engine

Most Popular