ಚಾಮರಾಜನಗರ: ಚಾಮರಾಜನಗರ ನಗರಸಭೆ ವ್ಯಾಪ್ತಿಯಲ್ಲಿರುವ ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ನಗರಸಭೆ ಪೌರಾಯುಕ್ತರಾದ ಎಸ್.ವಿ ರಾಮದಾಸ್ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ಪರವಾನಗಿ ಹೊಂದಿಲ್ಲದ, ಸ್ವಚ್ಚತೆ ಕಾಪಾಡದ ಹಾಗೂ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದ ಅಂಗಡಿಗಳಿಗೆ ನೋಟಿಸ್ ನೀಡಿ ದಂಡ ವಿಧಿಸಿದೆ.
ಅಂಗಡಿಗಳಿಗೆ ವ್ಯಾಪಕವಾಗಿ ಭೇಟಿ ನೀಡಿದ ತಂಡ ಬಾರ್ ಮತ್ತು ರೆಸ್ಟೋರೆಂಟ್‌ಗಳಿಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಲಾಗಿದೆಯೇ, ನಗರಸಭೆಯಿಂದ ಪರವಾನಗಿ ಹೊಂದಿದ್ದಾರೆಯೇ, ಪರವಾನಗಿ ನವೀಕರಿಸಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿದರು. ಈ ವೇಳೆ ಪರವಾನಗಿ ಪಡೆಯದ, ಪ್ಲಾಸ್ಟಿಕ್‌ಲೋಟ ಹಾಗೂ ಕವರ್‌ಗಳನ್ನು ಬಳಸುತ್ತಿದ ಅಂಗಡಿಗಳಿಗೆ ೭ ಸಾವಿರ ರೂ. ದಂಡ ವಿಧಿಸಿ ನೋಟಿಸ್ ನೀಡಿದರು.
ಪರವಾನಗಿ ಪಡೆಯದ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಶೀಘ್ರವೇ ನಗರ ಸಭೆಯಿಂದ ಪರವಾನಗಿ ಪಡೆದುಕೊಳ್ಳಬೇಕು, ಇಲ್ಲದಿದ್ದಲ್ಲಿ ಅಬಕಾರಿ ಇಲಾಖೆಗೆ ಮಾಹಿತಿ ನೀಡಿ ಪರವಾನಗಿ ರದ್ದು ಮಾಡಲು ಶಿಫಾರಸ್ಸು ಮಾಡಲಾಗುವುದೆಂದು ನಗರಸಭೆ ಪೌರಾಯುಕ್ತರಾದ ಎಸ್.ವಿ ರಾಮದಾಸ್ ಎಚ್ಚರಿಕೆ ನೀಡಿದರು.