Saturday, April 19, 2025
Google search engine

Homeರಾಜ್ಯನೃತ್ಯ ಪರಂಪರೆ ಭರತನಾಟ್ಯ ವೈಶಿಷ್ಟ್ಯ ಕಾರ್ಯಗಾಕ್ಕೆ ಕುಲಪತಿ ಬೆಟ್ಟಕೋಟೆ ಚಾಲನೆ

ನೃತ್ಯ ಪರಂಪರೆ ಭರತನಾಟ್ಯ ವೈಶಿಷ್ಟ್ಯ ಕಾರ್ಯಗಾಕ್ಕೆ ಕುಲಪತಿ ಬೆಟ್ಟಕೋಟೆ ಚಾಲನೆ

ಮೈಸೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪದ್ಮಭೂಷಣ ಡಾ. ವೆಂಕಟ ಲಕ್ಷ್ಮಮ್ಮ ನೃತ್ಯ ಪರಂಪರೆಯ ಭರತನಾಟ್ಯ ವೈಶಿಷ್ಟ್ಯದ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಬೆಟ್ಟಕೋಟೆ ಕುಲಪತಿಗಳು ಉದ್ಘಾಟಿಸಿದರು.

ಈ ವೇಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಕಾರ್ಯಗಾರ ನಿರ್ದೇಶಕರಾಗಿ ಕಲಾಶ್ರೀ ವಿದ್ವಾನ್ ಡಿ ಕೇಶವ ಭರತನಾಟ್ಯ ಕಲಾವಿದರು ಮೈಸೂರು ಇವರ ನೇತೃತ್ವದಲ್ಲಿ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಲಾಶ್ರೀ ವಿದ್ವಾನ್ ಡಿ ಕೇಶವ ಅವರು ನಮ್ಮ ಮೈಸೂರಿನ ಡಾ. ಗಂಗೂಬಾಯ್ ಹಾನಗಲ್ ಸಂಗೀತ ವಿವಿಯ ಆವರಣದಲ್ಲಿ ಇಂತಹ ಕಾರ್ಯಗಾರ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ನಡೆಸುತ್ತಿರುವುದು ಸಂತಸ ತಂದಿದೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ತಂತ್ರಜ್ಞಾನಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇಂತಹ ಪ್ರಾಚೀನ ಕಲೆಗಳು ನಶಿಸಿ ಹೋಗುತ್ತಿದ್ದು ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಾಗಿದೆ ಆ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಮಕ್ಕಳು ತುಂಬಾ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಭರತನಾಟ್ಯಂತಹ ವೈಶಿಷ್ಟ್ಯ ಕಲೆಗಳು ಶಾಶ್ವತವಾಗಿ ಉಳಿಯಬೇಕೆಂಬುದೇ ನಮ್ಮೆಲ್ಲರ ಬಯಕೆಯಾಗಿದೆ ಎಂದು ಮಾತನಾಡಿದರು ಇದೇ ವೇಳೆ ಡಾಕ್ಟರ್ ಗಂಗೂಬಾಯಿ ಹಾನಗಲ್ ಕುಲಸಚಿವರು ಶ್ರೀಮತಿ ರೇಖಾ ಕೆ ಎಸ್ ಹಾಗೂ ವಿದ್ಯಾರ್ಥಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular