ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸಾಲಿಗ್ರಾಮ ತಾಲೂಕಿನ ಹಾಡ್ಯ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಕಗ್ಗಳ ಬಸವರಾಜು ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.
ಸಂಘದ ಆಡಳಿತ ಮಂಡಳಿತ ಮಂಡಳಿಯ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಸವರಾಜು ಅವರನ್ನು ಹೊರತು ಪಡಿಸಿ ಬೇರೆಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಹಾಲಿ ಅಧ್ಯಕ್ಷರಾಗಿದ್ದ ಮಹೇಶ್ ಅವರ ರಾಜೀನಾಮೆ ಯಿಂದ ತೆರವಾಗಿದ್ದ ಸ್ಥಾನಕ್ಕೆ ಈ ಚುನಾವಣೆ ನಡೆಯಿತು ಸಹಕಾರ ಇಲಾಖೆಯ ಸಿ.ಡಿ.ಓ ಎಸ್.ರವಿ ಕಾರ್ಯನಿರ್ವಹಿಸಿದರು
ನಂತರ ಮಾತನಾಡಿದ ನೂತನ ಅಧ್ಯಕ್ಷ ಕಗ್ಗಳ ಬಸವರಾಜು ಕಳೆದ ಒಂದು ವರ್ಷದಿಂದ ಸಂಘದ ಹೊಸ ಷೇರುದಾರ ರೈತರಿಗೆ ನೀಡಬೇಕಾದ ಬೆಳೆ ಸಾಲವನ್ನು ವಿತರಣೆಗೆ ತ್ವರಿತ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ನಂತರ ನೂತನ ಅಧ್ಯಕ್ಷ ಬಸವರಾಜು ಅವರನ್ನು ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಪಿ.ಎಲ್.ಡಿ. ಮಾಜಿ ಅಧ್ಯಕ್ಷ ಎನ್.ಸಿ.ಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್ ಶಂಕರ್, ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಪಾನಿಮಹೇಶ್,ದಮ್ಮನಹಳ್ಳಿ ಕಾವ್ಯ ಬೀರೇಗೌಡ, ಮುಖಂಡ ಎಚ್.ಎಸ್. ರಘು, ಯತೀಶ್, ಅಂಕನಹಳ್ಳಿ ಷಣ್ಮುಖ, ಮುತ್ತು, ಉಮೇಶ್,ಚಂದು, ಸೋಸೈಟಿ ಮಾಜಿ ಅಧ್ಯಕ್ಷ ಎಚ್.ಎಸ್.ಮಹೇಶ್ ತ್ರಿಯಂಭಸ್ವಾಮಿ ಮತ್ತಿತರರು ನೂತನ ಅಧ್ಯಕ್ಷರನ್ನು ಅಭಿನಂಧಿಸಿದರು.
ಚುನಾವಣಾ ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಮಣಿಲಮ್ಮ, ನಿರ್ದೇಶಕರಾದ ಎಚ್.ಡಿ.ವೀರಭದ್ರಪ್ಪ, ಎ.ವಿ.ಚಂದ್ರಶೇಖರಯ್ಯ, ಮಹೇಶ್,ರಾಜಶೇಖರಯ್ಯ,ಚಂದ್ರೇಗೌಡ,ಹನುಮಂತಶೆಟ್ಟಿ,ಎಚ್.ವಿ.ರಾಕೇಶ್, ಸರೋಜಮ್ಮ, ಸಂಘದ ಸಿಇಓ ಆನಂತ್ ಗುಮ್ಮನಹಳ್ಳಿ, ಗುಮಾಸ್ತ ಕುಮಾರ್ ಕರ್ತಾಳ್, ಸೇರಿದಂತೆ ಮತ್ತಿತರರು ಹಾಜರಿದ್ದರು