Saturday, April 19, 2025
Google search engine

Homeರಾಜ್ಯಅಯೋಧ್ಯೆಯಲ್ಲಿ ೫೦ ಲಕ್ಷ ರೂ. ಮೌಲ್ಯದ ಬೀದಿ ದೀಪಗಳ ಕಳವು

ಅಯೋಧ್ಯೆಯಲ್ಲಿ ೫೦ ಲಕ್ಷ ರೂ. ಮೌಲ್ಯದ ಬೀದಿ ದೀಪಗಳ ಕಳವು

ಅಯೋಧ್ಯೆ: ಅಯೋಧ್ಯೆಯ ರಾಮಪಥ ಹಾಗೂ ಭಕ್ತಿಪಥದಲ್ಲಿದ್ದ ೫೦ ಲಕ್ಷ ರೂ. ಮೌಲ್ಯದ ಬೀದಿ ದೀಪಗಳನ್ನು ಕಳವು ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಅಯೋಧ್ಯೆಯಲ್ಲಿ ಹೆಚ್ಚಿನ ಭದ್ರತಾ ಪ್ರದೇಶದಲ್ಲಿರುವ ಭಕ್ತಿ ಪಥ ಮತ್ತು ರಾಮ ಪಥ ಮೇಲೆ ದೀಪಗಳನ್ನು ಅಳವಡಿಸಲಾಗಿತ್ತು ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆಗಸ್ಟ್ ೯ ರಂದು ದೂರು ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ. ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ನೀಡಿದ ಗುತ್ತಿಗೆಯಡಿಯಲ್ಲಿ ದೀಪಗಳನ್ನು ಸ್ಥಾಪಿಸಿದ ಯಶ್ ಎಂಟರ್‌ಪ್ರೈಸಸ್ ಮತ್ತು ಕೃಷ್ಣ ಆಟೋಮೊಬೈಲ್ಸ್ ಸಂಸ್ಥೆಯ ಪ್ರತಿನಿಧಿಯಿಂದ ದೂರು ದಾಖಲಾಗಿದೆ.

ರಾಮಪಥದಲ್ಲಿ ೬,೪೦೦ ಬಿದಿರಿನ ದೀಪಗಳು ಮತ್ತು ಭಕ್ತಿ ಪಥದಲ್ಲಿ ೯೬ ಪ್ರೊಜೆಕ್ಟರ್ ದೀಪಗಳನ್ನು ಅಳವಡಿಸಲಾಗಿದೆ. ಮಾರ್ಚ್ ೧೯ ರವರೆಗೆ ಎಲ್ಲಾ ದೀಪಗಳು ಇದ್ದವು ಆದರೆ ಮೇ ೯ ರಂದು ಪರಿಶೀಲನೆಯ ನಂತರ ಕೆಲವು ದೀಪಗಳು ಕಾಣೆಯಾಗಿರುವುದು ಕಂಡುಬಂದಿದೆ. ಇದುವರೆಗೆ ಸುಮಾರು ೩,೮೦೦ ದೀಪಗಳು ಬಿದಿರಿನ ದೀಪಗಳು ಮತ್ತು ೩೬ ಪ್ರೊಜೆಕ್ಟರ್ ದೀಪಗಳನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಶೇಖರ್ ಶರ್ಮಾ ದೂರಿನಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular