Saturday, April 19, 2025
Google search engine

Homeಅಪರಾಧಕಡಪ್ಪರ ಸಮೀರ್ ಹತ್ಯೆ ಪ್ರಕರಣ:ನಾಲ್ವರ ಬಂಧನ

ಕಡಪ್ಪರ ಸಮೀರ್ ಹತ್ಯೆ ಪ್ರಕರಣ:ನಾಲ್ವರ ಬಂಧನ

ಮಂಗಳೂರು (ದಕ್ಷಿಣ ಕನ್ನಡ): ರೌಡಿಶೀಟರ್, ಉಳ್ಳಾಲ ಕಡಪ್ಪರ ಸಮೀರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

ಕಿನ್ಯ ನಿವಾಸಿ ನಿಯಾಝ್, ಸುರತ್ಕಲ್ ಕೃಷ್ಣಾಪುರದ ಮುಹಮ್ಮದ್ ನೌಶಾದ್, ಬಜಾಲ್ ಶಾಂತಿನಗರದ ತನ್ವೀರ್ ಯಾನೆ ತನ್ನು ಮತ್ತು ಕಾಪು ಮಜೂರಿನ ಮುಹಮ್ಮದ್ ಇಕ್ಬಾಲ್ ಯಾನೆ ಇಕ್ಕು ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾಗಿದ್ದ ಸಮೀರ್ ನನ್ನು ಆಗಸ್ಟ್ 11ರಂದು ರಾತ್ರಿ ತಂಡವೊಂದು ತೊಕ್ಕೊಟ್ಟು ಕಲ್ಲಾಪುವಿನಲ್ಲಿ ಮಾರಕಾಯುಧಗಳಿಂದ ಕೊಚ್ಚಿ ಕೊಲೆಗೈದಿತ್ತು.

RELATED ARTICLES
- Advertisment -
Google search engine

Most Popular