Saturday, April 19, 2025
Google search engine

Homeರಾಜ್ಯಸುದ್ದಿಜಾಲದ.ಕ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ: ಸಚಿವ ಗುಂಡೂರಾವ್ ಧ್ವಜಾರೋಹಣ

ದ.ಕ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ: ಸಚಿವ ಗುಂಡೂರಾವ್ ಧ್ವಜಾರೋಹಣ

ಮಂಗಳೂರು: ದ.ಕ ಜಿಲ್ಲಾಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಇಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಿತು. ಬಳಿಕ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ನಾಡಿನ ಜನರಿಗೆ, ಜಿಲ್ಲೆಯ ಜನರಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಸಲ್ಲಿಸಿದರು.

ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗೆ ಕರ್ನಾಟಕ ಸರಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, ಸ್ವಾತಂತ್ರ್ಯೋತ್ಸವದ ನೈಜ ಉದ್ದೇಶವನ್ನು ಈಡೇರಿಸಿದ ತೃಪ್ತಿ ತಂದಿದೆ. ಗ್ಯಾರಂಟಿ ಯೋಜನೆಗಳು ಹೊಸ ಇತಿಹಾದ ಸೃಷ್ಟಿಸಿದೆ ಜನರಿಗೆ ನೆಮ್ಮದಿ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲಭೂತ ಸೌಕರ್ಯ ಸೇರಿದಂತೆ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ಅನುದಾನ ನೀಡಿದೆ ಎಂದರು.

ದ.ಕ ಜಿಲ್ಲೆಗೆ ಹೊಸದಾಗಿ ೧೦ ಇಂದಿರಾ ಕ್ಯಾಂಟೀನ್‌ಗಳು ಮಂಜೂರಾಗಿದೆ. ಮಂಗಳೂರು ನಗರದ ಬಳಿ ಇಂಟರ್‌ಗ್ರೇಟೆಡ್ ಡೌನ್‌ಶಿಫ್ ನಿರ್ಮಿಸಲು ಯೋಜನೆ ಹಾಕಲಾಗಿದೆ ಎಂದರು. ಮಳೆಯಿಂದ ದ.ಕ ಜಿಲ್ಲೆಯ ೬೦೦ಕ್ಕೂ ಅಧಿಕ ಮನೆಗಳಿಗೆ ಹಾನಿ, ಸಂತ್ರಸ್ತರಿಗೆ ಪರಿಹಾರ ನೀಡಲಾಗಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆಗೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು.ಜಗತ್ತಿನ ಎಲ್ಲಾ ದೇಶಗಳಲ್ಲೂ ಅಲ್ಪಸಂಖ್ಯಾತರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ ಎಂದರು.

RELATED ARTICLES
- Advertisment -
Google search engine

Most Popular