ಹುಣಸೂರು: ಹುಣಸೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಗೆ ಕಾಲೇಜಿನ ಶುಲ್ಕ ಭರಿಸಿಕೊಟ್ಟು ಬಡ ವಿದ್ಯಾರ್ಥಿ ಒಬ್ಬನಿಗೆ ಆಸರೆಯಾಗಿದ್ದಾರೆ ಹುಣಸೂರಿನ ಮಾಜಿ ಶಾಸಕರಾದ ಎಚ್ ಪಿ ಮಂಜುನಾಥ್.
ಹುಣಸೂರು ನಗರದ ಹಳ್ಳಿ ಮನೆ ಹೋಟೆಲ್ ನಲ್ಲಿ ಆದಿತ್ಯವರ್ಮ ಎಂಬ ಬಡ ವಿದ್ಯಾರ್ಥಿಯ ತನ್ನ ವಿದ್ಯಾಭ್ಯಾಸಕ್ಕಾಗಿ ಸಪ್ಲೇಯರ್ ಆಗಿ ಕೆಲಸ ಮಾಡಿಕೊಂಡು ಹುಣಸೂರಿನ ಶ್ರೀ ಸತ್ಯಸಾಯಿ ಕೈಗಾರಿಕಾ ತರಬೇತಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಆದರೆ ಕಾಲೇಜಿನ ಶುಲ್ಕ ಭರಿಸಲು ಹಾಗೂ ಪುಸ್ತಕ ಸಾಮಗ್ರಿಗಳನ್ನು ಕೊಳ್ಳಲು ಹೋಟೆಲ್ ನವರು ನೀಡುವ ಸಂಬಳ ಸಾಕಾಗದ ಕಾರಣ ಆಗಸ್ಟ್ 15ರಂದು ಹುಣಸೂರಿನ ಕಾಂಗ್ರೆಸ್ ಕಚೇರಿಗೆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಿಮಿತ್ತ ಎಚ್ ಪಿ ಮಂಜುನಾಥ್‍ರವರು ಆಗಮಿಸಿದ್ದರು.
ಈ ವೇಳೆ ವೇಳೆ ವಿದ್ಯಾರ್ಥಿ ಆದಿತ್ಯವರ್ಮ ತನ್ನ ಬಡತನದ ಪರಿಸ್ಥಿತಿಯನ್ನು ತಿಳಿಸಿ ಕಾಲೇಜಿನ ಶುಲ್ಕ ಭರಿಸಲು ಸಹಾಯಹಸ್ತ ನೀಡುವಂತೆ ಮಾಡಿದ ಮನವಿ ಮೇರೆಗೆ ಸ್ಥಳದಲ್ಲಿಯೇ ಕಾಲೇಜಿನ ಪ್ರಾಂಶುಪಾಲರೊಂದಿಗೆ ದೂರವಾಣಿ ಮೂಲಕ ಮಾಹಿತಿ ಪಡೆದು ಬಡ ವಿದ್ಯಾರ್ಥಿಯ ಕಾಲೇಜಿನ ಶುಲ್ಕವನ್ನು ನೀಡಿ ಬಡ ವಿದ್ಯಾರ್ಥಿಗೆ ವಿದ್ಯಾಭ್ಯಾಸ ಮುಂದುವರೆಸುವಂತೆ ಪ್ರೋತ್ಸಾಹಿಸಿದರು.