Saturday, April 19, 2025
Google search engine

Homeರಾಜ್ಯಜನಸಂಖ್ಯೆ ನಿಯಂತ್ರಿಸಲು ಭಾರತೀಯರು ಹೆಚ್ಚು ಗಮನ ಹರಿಸಬೇಕು: ನಾರಾಯಣ ಮೂರ್ತಿ

ಜನಸಂಖ್ಯೆ ನಿಯಂತ್ರಿಸಲು ಭಾರತೀಯರು ಹೆಚ್ಚು ಗಮನ ಹರಿಸಬೇಕು: ನಾರಾಯಣ ಮೂರ್ತಿ

ಲಕ್ನೋ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿಸಲು ಭಾರತೀಯರು ಸಾಕಷ್ಟು ಗಮನ ಹರಿಸುತ್ತಿಲ್ಲ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಯಾಗ್‌ರಾಜ್‌ದ ಮೋತಿಲಾಲ್ ನೆಹರು ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಏರುತ್ತಿರುವ ಜನಸಂಖ್ಯೆ ದೇಶಕ್ಕೆ ಸವಾಲಾಗಿದೆ. ಜನಸಂಖ್ಯೆ ನಿಯಂತ್ರಿಸಲು ಭಾರತೀಯರು ಹೆಚ್ಚು ಗಮನ ಹರಿಸಬೇಕು. ಇದರಿಂದ ತಲಾದಾಯ ಮತ್ತು ಆರೋಗ್ಯ ಸುಧಾರಣೆಯಾಗಬಹುದು ಎಂದು ತಿಳಿಸಿದರು.

ಭಾರತೀಯರು ತುರ್ತು ಪರಿಸ್ಥಿತಿಯ ಸಮಯದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯ ಬಗ್ಗೆ ಗಮನ ಹರಿಸಲಿಲ್ಲ ಎಂದು ಕಳವಳವ್ಯಕ್ತಪಡಿಸಿದ ಅವರು ಅಮೆರಿಕ, ಬ್ರೆಜಿಲ್ ಮತ್ತು ಚೀನಾಕ್ಕೆ ಹೋಲಿಸಿದರೆ ಭಾರತದ ತಲಾದಾಯ ತುಂಬಾ ಕಡಿಮೆ ಇದೆ ಎಂದು ಹೇಳಿದರು.

ನಾವು ದೊಡ್ಡ ಗುರಿಯನ್ನು ಹೊಂದಿರಬೇಕು. ಹಾಗೆಯೇ ಕಷ್ಟಪಟ್ಟು ದುಡಿಯುವ ಮೂಲಕ ನಮ್ಮ ಗುರಿಯನ್ನು ತಲುಪಬೇಕು ಎಂದರು.

ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯ 34 ಮತ್ತು ಪದವಿಯಲ್ಲಿ 13 ಚಿನ್ನದ ಪದಕ ವಿತರಣೆ ಮಾಡಲಾಯಿತು.

RELATED ARTICLES
- Advertisment -
Google search engine

Most Popular