ಮಂಡ್ಯ: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ನಡೆಯನ್ನು ಖಂಡಿಸಿ, ಇಂದು ಕಾಂಗ್ರೆಸ್ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಬಿಜೆಪಿ-ಜೆಡಿಎಸ್ ಪಕ್ಷಗಳು ರಾಜಭವನವನ್ನು ಅನೈತಿಕವಾಗಿ ಬಳಸಿಕೊಂಡಿವೆ ಎಂದು ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಆರೋಪಿಸಿದರು.
ಪ್ರತಿಭಟನೆಯಲ್ಲಿ ಶಾಸಕ ರಮೇಶ್ ಬಾಬು ಬಂಡಿ ಸಿದ್ದೇಗೌಡ ಮಾತನಾಡಿ, ಹಿಂದುಳಿದ ನಾಯಕನ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರೇ ನಿಮ್ಮ ನಾಯಕರಿಗೆ ಮುಡಾದಿಂದ ಯಾರಿಗೂ 50:50 ಸೈಟ್ ಕೊಟ್ಟಿಲ್ವ. ದಾಖಲೆ ಕೊಟ್ಟರೇ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಕೊಡಿಸ್ತೀರಾ?.ಯಾವ ನೈತಿಕತೆ ಇಟ್ಟುಕೊಂಡು ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡ್ತಿದ್ದೀರಾ ಎಂದು ಬಿಜೆಪಿ ನಾಯಕರುಗಳಿಗೆ ರಮೇಶ್ ಬಾಬು ಬಂಡಿಸಿದ್ದೇಗೌಡ ಚಾಟಿ ಬೀಸಿದ್ದಾರೆ.
ಬಿಜೆಪಿ-ಜೆಡಿಎಸ್ ನಾಯಕರಿಗೆ ನಾಚಿಕೆ ಇಲ್ವಾ?. ಸಂವಿಧಾನ ಬದ್ಧ ಸರ್ಕಾರವನ್ನ ಬುಡಮೇಲು ಮಾಡಲು ಹೊರಟಿದ್ದೀರಾ.ನೀವು ನಿಮ್ಮ ಆತ್ಮಸಾಕ್ಷಿಯನ್ನ ಮುಟ್ಟಿಕೊಳ್ಳಿ ಎಂದು ಬಿಜೆಪಿ- ಜೆಡಿಎಸ್ ನಾಯಕರಿಗೆ ಪ್ರಶ್ನೆ ಮಾಡಿದರು.
ಮುಡಾದಲ್ಲಿ ಬಿಜೆಪಿ-ಜೆಡಿಎಸ್ ನಿಯಮ ಮೀರಿ ಸೈಟ್ ಪಡೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿ ಮತ್ತೆ ದಾಖಲೆ ಬಿಡುಗಡೆ ಮಾಡುವುದಾಗಿ ರಮೇಶ ಬಂಡಿಸಿದ್ದೇಗೌಡ ಘೋಷಣೆ ಮಾಡಿದರು. ದಾಖಲೆ ಸಮೇತ ನಿಮ್ಮ ಮುಂದೆ ಬರ್ತೀನಿ. ದಾಖಲೆ ಬಿಡುಗಡೆ ಮಾಡುವ ಕಾಲ ಬಂದಿದೆ. ದಾಖಲೆ ಬಿಡುಗಡೆ ಮಾಡಿಯೇ ನಾನು ತೀರುತ್ತೇನೆ.
ಬಿಜೆಪಿ-ಜೆಡಿಎಸ್ ನಾಯಕರಿಗೆ ಶ್ರೀರಂಗಪಟ್ಟಣ ಶಾಸಕ ರಮೇಶ ಬಂಡಿಸಿದ್ದೇಗೌಡ ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಸಚಿವ ಚಲುವರಾಯಸ್ವಾಮಿಗೆ ನಟಿ ಭಾವನ, ಶಾಸಕರಾದ ನರೇಂದ್ರ ಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ ,ಗಣಿಗ ರವಿಕುಮಾರ್ ಸೇರಿ ಹಲವು ನಾಯಕರು ಸಾಥ್ ನೀಡಿದ್ದಾರೆ .