ಯಳಂದೂರು: ತಾಲೂಕಿನ ಕಂಹದಳ್ಳಿ ಗ್ರಾಮದ ನಾಯಕ ಬಡಾವಣೆಯಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ಹಾನಿಯಾಗಿರುವ ಘಟನೆ ಜರುಗಿದೆ.
ಈ ಬಡಾವಣೆಯ ನಾಯಕ ಬಡಾವಣೆಯ ಸಿದ್ದನಾಯಕ ಎಂಬುವವರಿಗೆ ಸೇರಿದ ಮನೆ ಇದಾಗಿದೆ. ಇವರ ಮನೆಯಲ್ಲಿ ಅಣ್ಣನ ಮಗಳು ಶಿಲ್ಪಾ ಸೇರಿದಂತೆ ಐವರು ಮನೆಯಲ್ಲಿ ವಾಸವಾಗಿದ್ದರು. ಈಚೆಗೆ ಸುರಿದ ಮಳೆಯಲ್ಲಿ ಮಳೆಯಿಂದ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಈ ಜಾಗದಲ್ಲಿಟ್ಟಿದ್ದ ಪಾತ್ರೆ ಬಟ್ಟೆಗಳೂ ಕೂಡ ಹಾನಿಗೊಳಗಾಗಿದೆ. ಈ ಸಂಬಂಧ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದು ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪರಿಹಾರ ಕೊಡಿಸುವ ಭರವಸೆ ನೀಡಿದೆ.