ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಮೈಸೂರು ಫೋಟೋಗ್ರಫಿ ಅಸೋಸಿಯೇಷನ್ ವತಿಯಿಂದ ಗಿಡ ನೆಡುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರದ ಕಳಸ್ತವಾಡಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಸಾಮಾನ್ಯವಾಗಿ ವಿಶ್ವ ಛಾಯಾಗ್ರಹಣ ದಿನದಂದು ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು. ಆದರೆ ಈ ಬಾರಿ ಮಕ್ಕಳಿಗೆ ಗಿಡ-ಮರಗಳು ಪ್ರಾಣಿ ಪಕ್ಷಿಗಳ ಅರಿವನ್ನು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶಾಲಾ ಆವರಣದಲ್ಲಿ ಪಕ್ಷಗಳಿಗೆ ಆಹಾರವಾಗುವಂತ ಹಣ್ಣಿನ ಗಿಡಗಳನ್ನು ನೆಡಲಾಯಿತು. ಅಲ್ಲದೇ ವಿಷೇಶವಾಗಿ ಮಕ್ಕಳಿಂದಲೇ ಗಿಡಗಳನ್ನು ನೆಡಿಸಿ ಆ ಗಿಡಗಳಿಗೆ ಮಕ್ಕಳ ಹೆಸರನ್ನು ಹೆಸರಿಸಲಾಯಿತು. ಜೊತೆಗೆ ಮಕ್ಕಳಿಗೆ ಗಿಡಮರಗಳು. ಪ್ರಾಣಿ ಪಕ್ಷಿಗಳ ಬಗ್ಗೆ ಅರಿವನ್ನು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮಂಡಳಿಯ ಉಪಾಧ್ಯಕ್ಷರು, ಸದಸ್ಯರುಗಳು, ಮುಖ್ಯೋಪಧ್ಯಾಯರು ಶಿಕ್ಷಕರು ಮತ್ತು ಮೈಸೂರು ಫೋಟೋಗ್ರಫಿ ಸದಸ್ಯರುಗಳು ಭಾಗವಹಿಸಿದ್ದರು.
ಮಕ್ಕಳು ಅತೀ ಉತ್ಸಾಹದಿಂದ ಗಿಡ ನೆಡುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಮುಖ್ಯೋಪಾಧ್ಯಾಯರು ಇಂಥ ಉತ್ತಮ ಕಾರ್ಯ ಅವರ ಶಾಲಾ ಆವರಣದಲ್ಲಿ ನಡೆಸಿಕೊಟ್ಟಿರುವುದನ್ನು ಶ್ಲಾಘಿಸಿದರು.