Sunday, April 20, 2025
Google search engine

Homeಸ್ಥಳೀಯಕೊಲ್ಕತ್ತ ವೈದ್ಯ ವಿದ್ಯಾರ್ಥಿನಿ ಹತ್ಯೆ, ಜಗತ್ತೇ ತಲೆತಗ್ಗಿಸುವ ವಿಷಯ :ಡಾ. ಸಿ.ಎನ್. ಮಂಜುನಾಥ್

ಕೊಲ್ಕತ್ತ ವೈದ್ಯ ವಿದ್ಯಾರ್ಥಿನಿ ಹತ್ಯೆ, ಜಗತ್ತೇ ತಲೆತಗ್ಗಿಸುವ ವಿಷಯ :ಡಾ. ಸಿ.ಎನ್. ಮಂಜುನಾಥ್

ಮೈಸೂರು: ಕೊಲ್ಕತ್ತಾ ಆರ್.ಜಿ. ಕರ ವೈದ್ಯಕೀಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿಯ ಮೇಲೆ ಆಗಿರುವ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಜಗತ್ತೇ ತಲೆ ತಗ್ಗಿಸುವ ವಿಷಯವಾಗಿದೆ ಎಂದು ಜಯದೇವ ಹೃದ್ಯೋಗ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾಕ್ಷೇತ್ರದ ಸಂಸದ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.

ಮೈಸೂರು ಜಯದೇವ ಆಸ್ಪತ್ರೆಗೆ ಸಂಸದರಾದ ಬಳಿಕ ಪ್ರಥಮ ಬಾರಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು ಮೆಡಿಕಲ್ ಕಾಲೇಜುಗಳಲ್ಲಿನ ಆಸ್ಪತ್ರೆಗಳಲ್ಲಿ ಶೇ. ೭೦% ಕೆಲಸವನ್ನು ಹಿರಿಯ ವೈದ್ಯರು, ಸ್ನಾತಕೋತ್ತರ ವೈದ್ಯರು ಮಾಡುತ್ತಾರೆ. ಈ ವೈದ್ಯರುಗಳಿಗೆ ಹೆಚ್ಚು ರಕ್ಷಣೆಯನ್ನು ಸರ್ಕಾರ ನೀಡಬೇಕು. ದೇಶದಲ್ಲಿರುವ ೭೦೬ ವೈದ್ಯಕೀಯ ಕಾಲೇಜುಗಳಲ್ಲಿ ಆಡಿಟ್ ಆಗಬೇಕು. ಮಹಿಳಾ ವೈದ್ಯರುಗಳಿಗೆ ಪ್ರತ್ಯೇಕ ಶೌಚಾಲಯ, ವಿಶ್ರಾಂತಿ ಕೊಠಡಿಗಳಿರಬೇಕು. ವೈದ್ಯರು ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆದ ೧೨ ಗಂಟೆ ಒಳಗೆ ಆಸ್ಪತ್ರೆಯ ಮುಖ್ಯಸ್ಥರು ಪೊಲೀಸರಿಗೆ ಕಂಪ್ಲೇಂಟ್‌ ಕೊಡಬೇಕು. ಗ್ರಾಮೀಣಆಸ್ಪತ್ರೆ ಮತ್ತುಜಿಲ್ಲಾ ಮಟ್ಟದಲ್ಲಿ ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ಆಗುತ್ತಿಲ್ಲ. ಇದರಿಂದ ವೈದರುಗಳ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ವೈದ್ಯರಆಯಸ್ಸು ೧೦ ರಿಂದ ೧೨ ವರ್ಷಕಡಿಮೆಯಾಗುತ್ತಿದೆ. ಗುತ್ತಿಗೆಆಧಾರದ ಮೇಲೆ ಕೆಲಸ ಮಾಡುವ ವೈದ್ಯರಿಗೆ ಕನಿಷ್ಟ ೭೫ ಸಾವಿರ ಸಂಬಳ ನೀಡಬೇಕು.

ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ನಿರಂತರ ಹಲ್ಲೆಗಳು ನಡೆಯುತ್ತಿದ್ದು, ಇದನ್ನು ತಡೆಗಟ್ಟಲು ಇರುವ ಕಾನೂನನ್ನು ಬಲಪಡಿಸಬೇಕು. ಯಾವುದೇ ವೈದ್ಯರ ಮೇಲೆ ರೋಗಿಗಳ ಪೋಷಕರು ದೂರುಕೊಟ್ಟರೆ ಪ್ರಾಥಮಿಕ ತನಿಖೆ ಆದ ನಂತರ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದ ಅವರು ರಾಜ್ಯದಲ್ಲಿ ಡೆಂಗ್ಯೂ, ಚಿಕನ್‌ಗುನ್ಯ, ಜೀಕಾ ಕಾಯಿಲೆ ಹೆಚ್ಚಾಗುತ್ತಿದ್ದು, ಸರ್ಕಾರ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವೈದ್ಯಕೀಯಅಧೀಕ್ಷಕಡಾ. ಕೆ.ಎಸ್. ಸದಾನಂದ್, ಡಾ. ಸಂತೋಷ್, ಡಾ. ರಾಜೀತ್, ಡಾ. ವೀಣಾನಂಜಪ್ಪ, ಡಾ. ಹೇಮಾಎಸ್., ಡಾ. ಜಯಪ್ರಕಾಶ್, ಡಾ. ಭಾರತಿ, ಡಾ. ಕುಮಾರ್, ಡಾ. ಮಂಜುನಾಥ್, ಡಾ. ಅಶ್ವಿನಿ, ಡಾ. ವಿಶ್ವನಾಥ್, ಡಾ. ಚಂದನ್, ಡಾ. ದೇವರಾಜ್, ಆರ್‌ಎಂಒಡಾ. ಪಶುಪತಿ, ನರ್ಸಿಂಗ್ ಅಧೀಕ್ಷಕಿಯೋಗಲಕ್ಷ್ಮಿ, ಹಿರಿಯ ಶುಶ್ರೂಷಾಧಿಕಾರಿ ಹರೀಶ್‌ಕುಮಾರ್, ಪಿಆರ್‌ಒ ವಾಣಿ ಮೋಹನ್, ಲೋಬೋ, ಸಯ್ಯದ್, ಮಹೇಂದ್ರ ಹಾಜರಿದ್ದರು.

RELATED ARTICLES
- Advertisment -
Google search engine

Most Popular