ಯಳಂದೂರು: ಪಟ್ಟಣದ ೯ ನೇ ವಾರ್ಡಿನ ಲಿಂಗರಾಜಮೂರ್ತಿ ರವರು ಪಟ್ಟಣ ಪಂಚಾಯಿತಿಯ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಈ ಸಂಬಂಧ ನರಗಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ. ಮಂಜುನಾಥ್ ಇಲಾಖೆಯ ವತಿಯಿಂದ ಆದೇಶ ಪತ್ರವನ್ನು ನೀಡಿದ್ದು ಪಟ್ಟಣ ಪಂಚಾಯಿತಿಗೆ ಮುಂದಿನ ಆದೇಶದವರೆಗೆ ಇವರನ್ನು ಸರ್ಕಾರವು ನಾಮ ನಿರ್ದೇಶಿತ ಸದಸ್ಯರಾದ ನೇಮಕ ಮಾಡಿದೆ ಎಂದು ಅಧಿಸೂಚನೆಯನ್ನು ಹೊರಡಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.