ಮಂಡ್ಯ: ಕೃಷ್ಣರಾಜಸಾಗರ ಜಲಾಶಯ ತುಂಬಿ ನೂರಾರು ಟಿಎಂಸಿ ನೀರು ಹರಿದು ಹೋದರೂ ಶಾಸಕರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಊರಿನ ಕೆರೆಗಳನ್ನು ತುಂಬಿಸುವ ಕಾಳಜಿ ಪ್ರದರ್ಶಿಸದಿರುವುದು ದುರದೃಷ್ಟಕರ ಸಂಗತಿಯಾಗಿದೆ.
ಇದರಿಂದಾಗಿ ಮದ್ದೂರಿನ ಹೊಸಕೆರೆ ಗ್ರಾಮದಲ್ಲಿ ಗ್ರಾಮಸ್ಥರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿರುವಂತಹ ಪ್ರಕರಣ ಬೆಳಕಿಗೆ ಬಂದಿದೆ.
ಕ್ಷೇತ್ರದ ಶಾಸಕರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡ್ಯಾಂ ತುಂಬಿ ನಾಲೆಗೆ ನೀರು ಹರಿಸಿದ್ರು ತಮ್ಮೂರಿನ ಕೆರೆ ಮಾತ್ರ ತುಂಬಿಸುತ್ತಿಲ್ಲ ಎಂದು ರೈತರು ಅಸಮಧಾನ ತೋಡಿಕೊಂಡಿದ್ದಾರೆ.
ಕಳೆದ ಬಾರಿ ಕೂಡ ಕೆರೆ ಬತ್ತಿದ್ದರಿಂದ ನಾವು ಬೆಳೆ ಬೆಳೆದಿಲ್ಲ ಆದ್ರೆ ಈ ಬಾರಿ ಕೆಆರ್‌ಎಸ್ ಡ್ಯಾಮ್ ತುಂಬಿದೆ, ಮಳೆ ಬರುತ್ತಿದೆ ಆದರೂ ನಮ್ಮೂರಿನ ಕೆರೆ ತುಂಬಿಸದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕೂಡಲೇ ಕೆರೆ ತುಂಬಿಸದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.