ಕಲಬುರಗಿ: ಸಿದ್ದರಾಮಯ್ಯ ೪೦ ವರ್ಷ ಇಂತಹ ಎಷ್ಟೋ ರಾಜಕಾರಣ ನೋಡಿದ್ದಾರೆ. ಅವರ ರಕ್ತದಲ್ಲೇ ಹೆದರಿಕೆ ಅನ್ನೋದಿಲ್ಲ
ಹೆದರಿಕೆ ಅನ್ನೋ ದು ಅವರ ರಕ್ತದಲ್ಲೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಸತ್ಯಕ್ಕೆ ಯಾವತ್ತಿಗೂ ಜಯ ಸಿಗುತ್ತದೆ. ನಮ್ಮ ಮುಖ್ಯಮಂತ್ರಿಗಳು ಯಾವ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ದಲಿತ ರಾಜ್ಯ ಪಾಲ ಎನ್ನೋ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಗೆಹ್ಲೋ ಟ್ ಅವರನ್ನ ಆ ಹುದ್ದೆಯಲ್ಲಿ ಕೂರಿಸಿದ್ದು ಸಂವಿಧಾನ, ಜಾತಿಯಲ್ಲ. ಬಿಜೆಪಿಗರದ್ದು ಅನಗತ್ಯ ವಿವಾದ. ಸಿಎಂ ಸಿದ್ದರಾಮಯ್ಯರಿಗೆ ಖರ್ಗೆಯವರಿಂದ ಹಿಡಿದು, ಸಚಿವರು, ಶಾಸಕರು ಎಲ್ಲರ ಬೆಂಬಲ ಇದೆ. ರಾಜ್ಯದಲ್ಲಿ ಹತ್ತು ವರ್ಷ ನಮ್ಮದೆ ಸರ್ಕಾರ ಇರುತ್ತೆ ಅದರಲ್ಲಿ ಅನುಮಾನ ಬೇಡ ಎಂದು ಹೇಳಿದರು.
ದೇಶದ ಅನೇಕ ಕಡೆ ರಾಜ್ಯಪಾಲರ ಹಸ್ತಕ್ಷೇಪ ನಡೆಯುತ್ತಿದೆ. ಮಾಧ್ಯಮದವರೇ ದೇಶದ ಯಾವ ರಾಜ್ಯದಲ್ಲಿ ಏನು ನಡೆಯುತ್ತಿದೆಯೋ ಅದೆಲ್ಲವನ್ನೂ ತೋರಿಸುತ್ತಿದ್ದಾರೆ ಎಂದು ಹೇಳಿದರು.