Sunday, April 20, 2025
Google search engine

Homeರಾಜ್ಯಸುದ್ದಿಜಾಲಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದೇವರಾಜು ಅರಸು: ಇಕ್ಬಾಲ್ ಹುಸೇನ್

ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ದೇವರಾಜು ಅರಸು: ಇಕ್ಬಾಲ್ ಹುಸೇನ್

ರಾಮನಗರ: ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿದ್ದಾಗ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಉಳುವವನೇ ಭೂ ಒಡೆಯನನ್ನಾಘಿ ಪರಿವರ್ತಿಸಿದರು, ಇದರಿಂದ ಭೂಮಿ ಇಲ್ಲದವರಿಗೆ ಉಳುಮೆಗಾಗಿ ಕೃಷಿ ಭೂಮಿ ದೊರೆಯಿತು, ಭೂಮಿ ಇಲ್ಲದವರಿಗೆ, ಬಡವರಿಗೆ ನ್ಯಾಯ ದೊರಕಿತು, ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಯಿತು ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್ ಅವರು ಹೇಳಿದರು.

ಅವರು ಆ. ೨೦ರ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಡಿ. ದೇವರಾಜ ಅರಸು ಅವರ ೧೦೯ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಫಾಟಿಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಈ ಹಿಂದೆ ಹಲವು ನಾಯಕರು ರಾಜ್ಯದಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ, ಆದರೆ ಡಿ. ದೇವರಾಜ ಅರಸು ರವರು ೧೯೬೯-೧೯೭೯ ರವರೆಗೆ ನಡೆಸಿದ ಆಡಳಿತ ಅರಸು ಯುಗವಾಗಿತ್ತು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯಗಳನ್ನು ಸ್ಥಾಪಿಸಿದರು. ೧೯೭೩ ನವೆಂಬರ್ ೧ ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು ಎಂದು ಹೇಳಿದರು.

ಜೀತಪದ್ದತಿಯನ್ನು ತೊಲಗಿಸಿ ಜೀತಮುಕ್ತಿ ಪದ್ದತಿಯನ್ನು ಜಾರಿಗೆ ತಂದು ಬಡವರ ಬಾಳಲ್ಲಿ ಬೆಳಕಾದರು. ಬಡವರು ಮುಕ್ತವಾಗಿ ಬದುಕಲು ಅವಕಾಶ ಮಾಡಿಕೊಟ್ಟರು. ಮಲ ಹೊರುವ ಪದ್ದತಿಯನ್ನು ರದ್ದು ಮಾಡಿದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ಹಿರಿಯ ಸಾಹಿತಿ, ಪತ್ರಕರ್ತರಾದ ಮಾರಣ್ಣ ಅವರು ಮಾತನಾಡಿ, ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುವಲ್ಲಿ ಡಿ.ದೇವರಾಜ ಅರಸು ಅವರ ಪಾತ್ರ ಬಹು ದೊಡ್ಡದು, ಕೃಷಿಕರು, ಬಡವರು, ಕೂಲಿ ಕಾರ್ಮಿಕರು ನೆಲೆ ಕಾಣಲು ಕಾರಣರಾದರು. ಮೀಸಲಾತಿ ವಿಸ್ತರಣೆ ತಂದರು, ಭೂಸುಧಾರಣೆ ಕಾಯ್ದೆ, ಜೀತಮುಕ್ತಿ ಪದ್ದತಿ, ಕೃಷಿ, ಹೈನುಗಾರಿಕೆಯಲ್ಲಿ ಹೀಗೆ ಅನೇಕ ಸುಧಾರಣೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದರು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಲೆ, ಸಾಹಿತ್ಯ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ರಾಮನಗರ ಜಿಲ್ಲಾ ಕ್ರೀಡಾಂಗಣದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೂ ಡಿ. ದೇವರಾಜ ಅರಸು ಅವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ಜರುಗಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಗ್ವಿಜಯ್ ಬೋಡ್ಕೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿಲಾಲ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಹಿಂದುಳಿದ ವರ್ಗಗಳ ಮುಖಂಡರುಗಳಾದ ಜಿ. ನಾಗರಾಜು (ರೈಡ್), ಉಮೇಶ್ ಚಾರ್, ಆರ್. ರಂಗಪ್ಪ, ಸೀತಾರಾಮ್ ಮಾಗಡಿ, ಬಿ. ರಂಗಸ್ವಾಮಿ, ಚಂದ್ರ ಶೇಖರ್, ರಂಗನಾಥ, ಸಿದ್ದಪ್ಪಾಜಿ, ವೀರಭದ್ರಯ್ಯ, ಗಣೇಶ್, ಸಂದೀಪ್, ಮಣಿಕಂಠ, ಚಂದ್ರಶೇಖರ್, ಸತೀಶ್ ಸೇರಿದಂತೆ ಇತರೆ ಸಮುದಾಯದ ಮುಖಂಡರುಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular