ಮೈಸೂರು: ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಶ್ರೀ ಕಾಗಿನೆಲೆ ಕನಕ ಗುರುಪೀಠದ ಶಾಖಾ ಮಠಕ್ಕೆ ಆ.೨೪ರ ಶನಿವಾರ ಮಧ್ಯಾಹ್ನ ೨ ಗಂಟೆಗೆ ಮೆಘಾಲಯರಾಜ್ಯಪಾಲರಾದ ಸಿ.ಎಚ್. ವಿಜಯ್‌ಶಂಕರ್‌ರವರು ಭೇಟಿ ನೀಡಿ ಶ್ರೀ ಶಿವಾನಂದಪುರಿ ಮಹಾಸ್ವಾಮೀಜಿರವರ ಆಶೀರ್ವಾದ ಪಡೆಯಲಿದ್ದು, ಶ್ರೀಮಠದ ಭಕ್ತರು, ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮೈಸೂರು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಸಿ.ಬಸವರಾಜು ತಿಳಿಸಿದ್ದಾರೆ.